ರೆಂಜಾಳ ಶಾಸ್ತಾವು ಯುವಕ ಮಂಡಲಕ್ಕೆ ಪ್ರಶಸ್ತಿ

0

ಸುಳ್ಯ ಯುವಜನ ಸoಯುಕ್ತ ಮಂಡಳಿ ವತಿಯಿಂದ ಸುಳ್ಯ ಯುವ ಸದನದಲ್ಲಿ ನಡೆದ 2023-24 ನೇ ಸಾಲಿನ ಸುಳ್ಯ ತಾಲೂಕಿನ ಅತ್ಯುತ್ತಮ ಯುವಕ ಯುವತಿ ಮಂಡಲ ಪ್ರಶಸ್ತಿ ಪ್ರಧಾನ ಸಮಾರಂಭವು ಸೆ. 14 ರಂದು ನಡೆದಿದ್ದು, ಮರ್ಕಂಜದ ರೆಂಜಾಳ ಶ್ರೀ ಶಾಸ್ತಾವು ಯುವಕ ಮಂಡಲವು ಎರಡನೇ ವರ್ಷ ಸುಳ್ಯ ತಾಲೂಕಿನ ಗಮನಾರ್ಹ ಸಾಧನೆಗೈದ ಪ್ರಶಸ್ತಿಗೆ ಭಾಜನವಾಗಿದೆ. ಇಂದು‌ ನಡೆದ ಕಾರ್ಯಕ್ರಮದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರಿಂದ ಯುವಕ ಮಂಡಲದ ಅಧ್ಯಕ್ಷರಾದ ರಾಜೇಶ್ ಬೇರಿಕೆ ಹಾಗೂ ಸದಸ್ಯರು ಪ್ರಶಸ್ತಿ ಪಡೆದುಕೊಂಡರು.