ನಿಂತಿಕಲ್ಲು: ಕೆ.ಎಸ್ ಗೌಡ ಪದವಿ ಪೂರ್ವ ಕಾಲೇಜಿನ ಬಾಲಕರ ವಾಲಿಬಾಲ್ ತಂಡ ಜಿಲ್ಲಾ ಮಟ್ಟಕ್ಕೆ

0

ಶಾಲಾ ಶಿಕ್ಷಣ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇವರ ಆಶ್ರಯದಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ನಿಂತಿಕಲ್ಲಿನ ಕೆ.ಎಸ್ ಗೌಡ ಪದವಿ ಪೂರ್ವ ಕಾಲೇಜಿನ ಬಾಲಕರ ತಂಡ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ತಂಡದ ನಾಯಕ ವಿಖ್ಯಾತ್ ಎಂ.ವಿ ಉತ್ತಮ ಸ್ಟ್ರೈಕರ್, ತೇಜಸ್ ಕೆ.ಎಲ್ ಉತ್ತಮ ಪಾಸರ್ ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.


ತಂಡಕ್ಕೆ ಭೌತಶಾಸ್ತ್ರ ಉಪನ್ಯಾಸಕ ಉಜ್ವಲ್ ಕೆ.ಎಚ್ ತರಬೇತಿ ನೀಡುತ್ತಿದ್ದಾರೆ. ವಿಜೇತರನ್ನು ಆಡಳಿತ ಮಂಡಳಿ ಅಧ್ಯಕ್ಷರಾದ ಅಶೋಕ್ ಕುಮಾರ್ ಕೆ.ಎಸ್, ಪ್ರಾಚಾರ್ಯರಾದ ಸದಾನಂದ ರೈ ಕೂವೆಂಜ ಅಭಿನಂದಿಸಿದರು. ಉಪನ್ಯಾಸಕಿ ಜ್ಯೋತ್ಸ್ನಾ ಎಂ.ಜೆ ಸಹಕರಿಸಿದರು.