ದ.ಕ ಸಂಪಾಜೆ ಗ್ರಾಮದ ಕಲ್ಲುಗುಂಡಿ ಕಡಪಾಲ ನಿವಾಸಿ ಮಾಧವ ಅವರು ಅಲ್ಪ ಕಾಲದ ಅಸೌಖ್ಯದಿಂದ ಪುತ್ತೂರಿನ ಆಸ್ಪತ್ರೆಯಲ್ಲಿ ಸೆ 22 ರಂದು ನಿಧನರಾದರು.
ಅವರಿಗೆ 69 ವರ್ಷ ವಯಸ್ಸಾಗಿತ್ತು.
ಕಳೆದ ಹಲವಾರು ವರ್ಷಗಳಿಂದ ಸಂಪಾಜೆ ವ್ಯಾಪ್ತಿಯಲ್ಲಿ ಉಗ್ರಾಣಿಯಾಗಿ ಕೆಲಸ ನಿರ್ವಹಿಸಿದ್ದಾರೆ.
ಮೃತರು ಪತ್ನಿ ಕುಸುಮಾ , ಪುತ್ರ ಗೋಪೀಶ, ಧನ್ ರಾಜ್ , ಪುತ್ರಿ ತೇಜಸ್ವಿ, ಹಾಗೂ ಕುಟುಂಬಸ್ಥರನ್ನು, ಬಂಧು ಮಿತ್ರರರನ್ನು ಆಗಲಿದ್ದಾರೆ.