ಕುಕ್ಕುಜಡ್ಕ : ಚೊಕ್ಕಾಡಿ ಪ್ರೌಢಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ ) ಸುಳ್ಯ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಧರ್ಮಸ್ಥಳ ಮತ್ತು ಚೊಕ್ಕಾಡಿ ಪ್ರೌಢಶಾಲೆ ಇವರ ಜಂಟಿ ಆಶ್ರಯದಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ಸೆಪ್ಟೆಂಬರ್ 21ರಂದು ಚೊಕ್ಕಾಡಿ ಪ್ರೌಢಶಾಲಾ ಶಾಲೆಯಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಗುರುಗಳಾದ ಸಂಕೀರ್ಣ ಚೊಕ್ಕಾಡಿ ವಹಿಸಿ ಶುಭ ಹಾರೈಸಿದರು. ಜಾಲ್ಸೂರು ವಲಯದ ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷ ಭಾಸ್ಕರ್ ಅಡ್ಕಾರ್ ರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಸ್ವಾಸ್ತ್ಯ ಸಮಾಜ ನಿರ್ಮಾಣವಾಗಬೇಕಾದರೆ ಯುವ ಜನತೆಯ ಪಾತ್ರ ಬಹಳ ಮುಖ್ಯ. ಹದಿ ಹರೆಯದಲ್ಲಿ ದಾರಿ ತಪ್ಪುವ ವಿದ್ಯಾರ್ಥಿಗಳ ಬಗ್ಗೆ ಜಾಗೃತರಾಗಬೇಕು. ಸಪ್ತ ವ್ಯಸನಗಳಲ್ಲಿ ಮಾದಕ ವಸ್ತುಗಳ ಬಗ್ಗೆ ಅರಿವು ಮೂಡಿಸಿ ವ್ಯಸನ ಮುಕ್ತ ಜೀವನ ನಡೆಸಿ ಎಂದು ತರಬೇತಿ ಕಾರ್ಯಕ್ರಮದಲ್ಲಿ ಕರೆ ಕೊಟ್ಟರು.

ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ)ಸುಳ್ಯ ಜಾಲ್ಸೂರು ವಲಯದ ಮೇಲ್ವಿಚಾರಕರಾದ ತೀರ್ಥರಾಮ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಪ್ರಸ್ತಾವಿಕ ಮಾತನಾಡಿ ಪ್ರತಿಜ್ಞಾ ವಿಧಿ ಭೋದಿಸಿದರು. ಶಾಲಾ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ವಿಶ್ವನಾಥ ಮೂಕಮಲೆ , ಕುಕ್ಕುಜಡ್ಕ ಒಕ್ಕೂಟದ ಅಧ್ಯಕ್ಷ ಹರಿಶ್ಚಂದ್ರ ಉಪಸ್ಥಿತರಿದ್ದರು.

ಪೈಲಾರ್ ಸೇವಾಪ್ರತಿನಿಧಿಗಳಾದ ಚಂದ್ರಪ್ರಕಾಶ್ ನಿರೂಪಿಸಿ , ಸಿಎಸ್ ಸಿ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಸ್ವಾಗತಿಸಿದರು. ಶಾಲೆಯ ಸಹ ಶಿಕ್ಷಕ ಹರಿಪ್ರಸಾದ್ ಧನ್ಯವಾದ ಗೈದರು. ಶಿಕ್ಷಕ ವೃಂದ &ಶಾಲೆಯ ಮಕ್ಕಳು ಮಾಹಿತಿ ಪಡಕೊಂಡರು