ಸೆ. 24 ರಂದು ಬಂಟ್ವಾಳದಲ್ಲಿ ನಡೆದ ದ.ಕ ಜಿಲ್ಲಾ ರೈತ ಸಂಘದ ಸಭೆ ಹಾಗೂ ರೈತ, ಕಾರ್ಮಿಕ, ದಲಿತ ಒಕ್ಕೂಟದ ಸಭೆಯಲ್ಲಿ ರಾಜ್ಯ ಕಾರ್ಮಿಕ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾದ ಕೆ.ಪಿ ಜಾನಿಯವರನ್ನು ಗೌರವಿಸಲಾಯಿತು.
ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ, ಪ್ರಮುಖರಾದ ಸನ್ನಿ ಡಿ ಸೋಜ, ರಾಮಣ್ಣ ವಿಟ್ಲ, ಕೃಷ್ಣಪ್ಪ, ಯಾದವ ಶೆಟ್ಟಿ ಭಾಗವಹಿಸಿದ್ದರು.
ಕೆ ಪಿ ಜಾನಿಯವರು ಮಾತನಾಡಿ ಮಂಡಳಿಯಲ್ಲಿ ಕಾರ್ಮಿಕರ ಪರವಾಗಿ ಕೆಲಸ ಮಾಡಲು ಪ್ರಯತ್ನಿಸುವುದು ಮತ್ತು ದ ಕ ಜಿಲ್ಲಾ ಒಕ್ಕೂಟಕ್ಕೆ ಸಹಕರಿಸಲಾಗುವುದೆಂದು ನುಡಿದರು.
ಸಭೆಯಲ್ಲಿ ಒಸ್ವಾಲ್ಡ್ ಪ್ರಕಾಶ್ ಪೆರ್ನಾಂಡೀಸ್, ಶಾಹುಲ್ ಹಮೀದ್, ರೂಪೇಶ್ ರೈ, ಎಬ್ರಾಹಿಂ ಕಲೀಲ್ ಹಾಜರಿದ್ದರು.
ಸುಳ್ಯದಿಂದ ದಿವಾಕರ ಪೈ ಆರಂಬೂರು, ಲೋಲಜಾಕ್ಷ ಭೂತಕಲ್ಲು, ಭರತ್ ಕುಮಾರ್ ಕೆ, ಮಾಧವ ಗೌಡ ಸುಳ್ಯಕೋಡಿ, ಮಂಜುನಾಥ್ ಮಡ್ತಿಲ ಹಾಜರಿದ್ದರು.