ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ಮುಖ್ಯಸ್ಥರಾದ ಕೆ. ಯಶವಂತ ರೈ ಸೆ.30 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
ಇವರು ಕಡಬ ತಾಲ್ಲೂಕು ಬಂಟ್ರ ಗ್ರಾಮದ ಮರ್ಧಾಳ ದಿlನಾರಾಯಣ ರೈ ಮತ್ತು ದಿ.l ಲಕ್ಷ್ಮೀ ಎನ್ ರೈ ದಂಪತಿಗಳ ಪುತ್ರ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ.ಹಿ ಪ್ರಾ ಶಾಲೆ ಬಂಟ್ರ ಇಲ್ಲಿ ಪಡೆದರು. ಪ್ರೌಢ ಶಿಕ್ಷಣವನ್ನು ಸ.ಪ್ರೌ.ಶಾಲೆ ಕಡಬ ಇಲ್ಲಿ ಪಡೆದು ಪದವಿ ಪೂರ್ವ ಶಿಕ್ಷಣವನ್ನು ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಎಸ್.ಎಸ್.ಪಿ.ಯು.ಕಾಲೇಜಿನಲ್ಲಿ ಪಡೆದರು. ಸೈಂಟ್ ಫಿಲೋಮಿನಾ ಪುತ್ತೂರು ಇಲ್ಲಿ ಪದವಿಯನ್ನು ಪಡೆದು ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಮಂಗಳೂರು ಇಲ್ಲಿ ಬಿ.ಎಡ್ ಪದವಿ ಪಡೆದರು.
1988 ರಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜ್ ವಿಜ್ಞಾನ ಪದವಿಧರ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿ ಬಳಿಕ 13 ವರ್ಷಗಳಿಂದ ಪ್ರೌಢಶಾಲಾ ಮುಖ್ಯಸ್ಥರಾಗಿ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಒಟ್ಟು 37 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ತನ್ನ ಸೇವಾ ಅವಧಿಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ವಿಕಸನಕ್ಕೆ ಪೂರಕವಾದ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿ ವಿಜ್ಞಾನ ಮಾದರಿ ಪಾಠ ಮಾಡುವುದರೊಂದಿಗೆ ತಾಲೂಕು ಜಿಲ್ಲೆ, ರಾಜ್ಯ ಮಟ್ಟಗಳಲ್ಲಿ ಮಿಂಚುವಂತೆ ಮಾಡಿರುತ್ತಾರೆ . ವಿಜ್ಞಾನ ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಮಾರ್ಗದರ್ಶನ ಮಾಡಿರುತ್ತಾರೆ .ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ವಿಕಸನದೊಂದಿಗೆ ಆಧ್ಯಾತ್ಮಿಕ ವಿಕಸನವು ಆಗಬೇಕೆಂಬ ಉದ್ದೇಶದಿಂದ 9 ತುಳು ನಾಟಕಗಳನ್ನು, 7 ಕನ್ನಡ ನಾಟಕಗಳನ್ನು ಎರಡು ಕವನ ಸಂಕಲನಗಳನ್ನು ಅನೇಕ ರೂಪಕಗಳನ್ನು ಸ್ವತಃ ರಚಿಸಿ 400ಕ್ಕಿಂತ ಹೆಚ್ಚು ಅಧಿಕ ವಿದ್ಯಾಸಂಸ್ಥೆಗಳಲ್ಲಿ ಹಾಗೂ ಸಂಘ ಸಂಸ್ಥೆಗಳಲ್ಲಿ ನಿರ್ದೇಶಿಸಿ ಅಭಿನಯಿಸುವಂತೆ ಮಾಡಿರುತ್ತಾರೆ. ಇವರ “ನಾಗದೇವತೆ” ಮತ್ತು “ನಾಗದೀಪಾ” ಕವನ ಸಂಕಲನಗಳು ಖ್ಯಾತ ಗಾಯಕರುಗಳು ಹಾಡಿ ಕ್ಯಾಸೆಟ್ ಬಿಡುಗಡೆ ಮಾಡಲಾಗಿದೆ. ಸುಮಾರು ದೇವಾಲಯ, ಚರ್ಚ್, ಮಸೀದಿ ಸಂಘ ಸಂಸ್ಥೆಗಳಲ್ಲಿ 500ಕ್ಕೂ ಮಿಕ್ಕಿ ಹೆಚ್ಚು ಪ್ರವಚನಗಳನ್ನು ನೀಡಿರುತ್ತಾರೆ. ಸಮಾಜಮುಖಿಯಾಗಿ ಗ್ರಾಮೀಣ ಅಭಿವೃದ್ಧಿ ಯೋಜನೆ ಫಲಾನುಭವಿಗಳಿಗೆ ಮಾಹಿತಿ ಕಾರ್ಯಗಾರ ಮಧ್ಯವರ್ಜನ ಕಾರ್ಯಕ್ರಮಗಳಲ್ಲಿ ಮುಖ್ಯ ಭಾಷೆಣ ಕಾರಗಾಗಿ ಹಾಗೂ ಸಲಹೆಗಾರರಾಗಿ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 75ಕ್ಕಿಂತಲೂ ಮುಗಿಲಾಗಿ ನಾಟಕ ಯಕ್ಷಗಾನ ರೂಪಕ ಜಾನಪದ ನೃತ್ಯ ಇತ್ಯಾದಿಗಳಿಗೆ ನಿರ್ದೇಶಕರಾಗುವುದರೊಂದಿಗೆ ಸ್ವತಃ ರಚಿಸಿ ಹಾಡಿದ್ದಾರೆ. ಹೆಚ್ಚಿನ ನಾಟಕ, ಯಕ್ಷಗಾನದಲ್ಲಿ ಬಹುತೇಕ ಪಾತ್ರಗಳನ್ನು ಇವರು ಮಾಡಿ ಮಿಂಚಿದವರು. ಇವರಿಗೆ ಈಗಾಗಲೇ ರಾಜ್ಯ ವಿಜ್ಞಾನ ನಾಟಕ ಪ್ರಶಸ್ತಿ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಜಿಲ್ಲಾ ವಿಜ್ಞಾನ ಸಂಘಟನಾ ಪ್ರಶಸ್ತಿ, ಕನ್ನಡ ರತ್ನ ಶಿಕ್ಷಕ ಪ್ರಶಸ್ತಿ, ಶಿಕ್ಷಕ ಶ್ರೀ ಪ್ರಶಸ್ತಿ, ಪ್ರಣವ ಶಿಕ್ಷಕರ ಪ್ರಶಸ್ತಿ , ಮುಂತಾದ ಅನೇಕ ಪ್ರಶಸ್ತಿಗಳು ಬರುವುದರೊಂದಿಗೆ ಅನೇಕ ಸಂಘ ಸಂಸ್ಥೆ ಗೌರವಿಸಿವೆ. ಪ್ರಕೃತ ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿರುವ ಇವರು ಕಲಿತ ಶಾಲೆಯಲ್ಲೇ ಶಿಕ್ಷಕರಾಗಿ ಮುಖ್ಯ ಶಿಕ್ಷಕರಾದವರು. ಇವರ ಪತ್ನಿ ಸುಜಾತ .ಎಂ ಸರ್ಕಾರಿ ಉನ್ನತೀಕರಿಸಿದ ಶಾಲೆ ಕೊಯಿಲ ಇಲ್ಲಿ ಮುಖ್ಯೋಪಾಧ್ಯಾಯರಾಗಿದ್ದಾರೆ. ಪುತ್ರ ಸಾಯಿ ಕಾರ್ತಿಕ್ ಇಂಜಿನಿಯರಿಂಗ್ ಮುಗಿಸಿ ಎಂ.ಬಿ.ಎ ಪದವಿ ಪಡೆದು ಬೆಂಗಳೂರಿನಲ್ಲಿ ಸುವಿಝನ್ ಕಂಪನಿಯಲ್ಲಿ ಎಚ್.ಆರ್ ಆಗಿದ್ದಾರೆ. ಪುತ್ರಿ ಸಾಯಿ ಕೃಪಾ ಐ.ಎ.ಎಸ್ ಕೋಚಿಂಗ್ ನೊಂದಿಗೆ ಪದವಿ ಪಡೆದು ಮಂಗಳೂರಿನ ಎಸ್. ಡಿ.ಎಂ. ಕಾಲೇಜಿನಲ್ಲಿ ಎಂ.ಬಿ.ಎ ಶಿಕ್ಷಣ ಪಡೆಯುತಿದ್ದಾರೆ.