ಸಾಕು ಬೀಡಾಡಿ ಆಡುಗಳಿಂದ ವ್ಯಾಪಾರಸ್ಥರಿಗೆ ಪಾದಚಾರಿಗಳಿಗೆ ಉಪಟಳ

0


ಸುಳ್ಯ ನಗರದ ಕೇರ್ಪಳ ಪರಿಸರದಲ್ಲಿ ಸಾಕು ಆಡುಗಳಿಂದಾಗಿ ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ವ್ಯಾಪಾರಿಗಳು ದಿನ ನಿತ್ಯ ತೊಂದರೆ ಅನುಭವಿಸುವಂತಾಗಿದೆ. ರಸ್ತೆಯಲ್ಲಿ ಸುತ್ತಾಡುತ್ತಿರುವ ಆಡುಗಳು ಶಾಲೆಯ ವಿದ್ಯಾರ್ಥಿಗಳು ನಡೆದುಕೊಂಡು ಹೋಗುತ್ತಿರುವಾಗ ಮೈಮೇಲೆ ಹಾಯಲು ಬರುತ್ತಿವೆ. ರಸ್ತೆಯಲ್ಲಿ
ಅಡ್ಡ ದಿಡ್ಡಿಯಾಗಿ ಓಡಾಡುವುದರಿಂದ ವಾಹನ ಸವಾರರಿಗೂ ಸಮಸ್ಯೆ ಉಂಟು ಮಾಡುತ್ತಿವೆ. ವಾರಸುದಾರರು ಆಡುಗಳನ್ನು ಕೂಡಿ ಹಾಕದೆ ಇರುವುದರಿಂದ ರಾತ್ರಿಯಾಗುತ್ತಲೆ ಅಂಗಡಿಗಳ ಮುಂದೆ ಮಲಗಿ ಗಲೀಜು ಮಾಡುತ್ತಿದ್ದು ವ್ಯಾಪಾರಿಗಳಿಗೆ ದಿನಂಪ್ರತಿ ಕಿರಿ ಕಿರಿ ಉಂಟು ಮಾಡುತ್ತಿವೆ ಎಂದು ಪರಿಸರದ ವ್ಯಾಪಾರಸ್ಥರು ದೂರಿಕೊಂಡಿದ್ದರು.