ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ತಾಲೂಕಿನ ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ಮತ್ತು ರಿನೀವಲ್ ಮಾಡುವ ಕ್ಯಾಂಪ್ ಆರೋಗ್ಯ ಇಲಾಖೆ ಮತ್ತು ವಿಕಲ ಚೇತನರ ಇಲಾಖೆಯ ಸಹಯೋಗದೊಂದಿಗೆ ಜಂಟಿಯಾಗಿ
ಅ. 22 ರಂದು ನಡೆಯಿತು.
ವಿಕಲಚೇತನರ ಇಲಾಖೆಯ ತಾಲೂಕು ಪಂಚಾಯತ್ ನ ಎಂ.ಆರ್.ಡಬ್ಲ್ಯೂ ಚಂದ್ರಶೇಖರ್, ನಗರ ಪಂಚಾಯತ್ ನ ವಿಕಲ ಚೇತನರ ಇಲಾಖೆಯ ಯು.ಆರ್. ಡಬ್ಲ್ಯೂ ಪ್ರವೀಣ್ ನಾಯಕ್ ಇತರ ಪಂಚಾಯತ್ ಗಳ ವಿ.ಆರ್.ಡಬ್ಲ್ಯೂ ರವರಾದ ಉಮ್ಮರ್, ವೆಂಕಟ್ರಮಣ, ಸದಾನಂದ, ಮೀನಾಕ್ಷಿ, ಕೃಷ್ಣ ಪ್ರಸಾದ್,ರಂಜಿನಿ ಮತ್ತು ಆರೋಗ್ಯ ಇಲಾಖೆಯ ನಯನ ಮತ್ತು ಇನ್ನಿತರರು ಹಾಜರಿದ್ದರು
ತಜ್ಞ ವೈದ್ಯರು ಹಾಜರಿದ್ದು ಸಹಕಾರ ನೀಡಿದರು. ಹಲವಾರು ಜನರಿಗೆ ಗುರುತಿನ ಚೀಟಿ ನೀಡಲಾಯಿತು.