Home ಕ್ರೀಡೆ ನ. 2 : ಪೆರಾಜೆ ಅಗ್ನಿ ಯುವಕ ಮಂಡಲದ ವತಿಯಿಂದ ಗ್ರಾಮಸ್ಥರ ಕ್ರೀಡಾಕೂಟ -2024

ನ. 2 : ಪೆರಾಜೆ ಅಗ್ನಿ ಯುವಕ ಮಂಡಲದ ವತಿಯಿಂದ ಗ್ರಾಮಸ್ಥರ ಕ್ರೀಡಾಕೂಟ -2024

0

ಪೆರಾಜೆ ಗ್ರಾಮದ ಬಂಟೋಡಿ ಅಗ್ನಿ ಯುವಕ ಮಂಡಲದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ 65 ಕೆ.ಜಿ ವಿಭಾಗದ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟ ಮತ್ತು ಗ್ರಾಮಸ್ಥರ ಕ್ರೀಡಾಕೂಟ ನ. 2 ರಂದು ಪೆರಾಜೆ ಜ್ಯೋತಿ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ಹಂಪಿ ಪ್ರಸರಾಂಗ ಕನ್ನಡ ವಿಶ್ವ ವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕರು ಮತ್ತು ನಿರ್ದೇಶಕರಾದ ಮಾಧವ ಪೆರಾಜೆ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಅಗ್ನಿ ಯುವಕ ಮಂಡಲದ ಅಧ್ಯಕ್ಷ ವಿಜಯ್ ಕುಮಾರ್ ಪಿ.ಎಸ್. ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಚಂದ್ರಕಲಾ ಬಾಲಚಂದ್ರ, ಪೆರಾಜೆ ಜ್ಯೋತಿ ವಿದ್ಯಾಸಂಘದ ಅಧ್ಯಕ್ಷ ಎನ್.ಎ.ಜ್ಞಾನೇಶ್ ನಿಡ್ಯಮಲೆ, ಜ್ಯೋತಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ನಾಗರಾಜ್ ಉಪಸ್ಥಿತರಿರುವರು.

ಕ್ರೀಡೋತ್ಸವ ಪ್ರಯುಕ್ತ 65 ಕೆ. ಜಿ. ವಿಭಾಗದ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟ ನಡೆಯಲಿದ್ದು, ಪೆರಾಜೆ ಗ್ರಾಮದ ಪುರುಷರು ಮತ್ತು ಮಹಿಳೆಯರಿಗೆ ಹಲವು ಕ್ರೀಡಾ ಸ್ಪರ್ಧೆಗಳು ನಡೆಯಲಿದ್ದು, ಪುರುಷರ ಕಬಡ್ಡಿ ಪಂದ್ಯಾಟ , ಮಹಿಳೆಯರ ಹಗ್ಗ ಜಗ್ಗಾಟ, ಪುರುಷರ ರಸ್ತೆ ಓಟ, ಪುರುಷ ಮತ್ತು ಮಹಿಳೆಯರಿಗೆ 100ಮೀ ಓಟ, ಮಡಿಕೆ ಒಡೆಯುವುದು, ಲಕ್ಕಿ ಗೇಮ್ ಹಾಗೆಯೇ ಸಾಂಸ್ಕೃತಿಕ ಸ್ಪರ್ಧೆಗಳಾದ ಭಾವಗೀತೆ, ಮದರಂಗಿ ಇಡುವ ಸ್ಪರ್ದೆಗಳು ನಡೆಯಲಿವೆ. ಹೆಚ್ಚಿನ ಮಾಹಿತಿಗಾಗಿ : 77600 84273, 93805 49746, 72596 02455 ಸಂಪರ್ಕಿಸಿ

NO COMMENTS

error: Content is protected !!
Breaking