ಜಾಲ್ಸೂರು ಗ್ರಾಮದ ಅಡ್ಕಾರು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಪ್ರೇಮಲತಾ ಎನ್. ಅವರು ತಮ್ಮ ಸುದೀರ್ಘ 41 ವರ್ಷಗಳ ಸೇವಾವಧಿಯಿಂದ ಅ.31ರಂದು ನಿವೃತ್ತಿ ಹೊಂದಲಿದ್ದಾರೆ.
1983ರಲ್ಲಿ ತೊಡಿಕಾನ ಗ್ರಾಮದ ಅಡ್ಯಡ್ಕ ಅಂಗನವಾಡಿ ಕಾರ್ಯಕರ್ತೆಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ ಶ್ರೀಮತಿ ಪ್ರೇಮಲತಾ ಎನ್. ಅವರು ಒಂದು ವರ್ಷ ಅಡ್ಯಡ್ಕದಲ್ಲಿ ಸೇವೆಸಲ್ಲಿಸಿ, 1984ರಿಂದ 1994ರವರೆಗೆ ತೊಡಿಕಾನ ಅಂಗನವಾಡಿ ಕಾರ್ಯಕರ್ತೆಯಾಗಿ ಹತ್ತು ವರ್ಷಗಳ ಸೇವೆ, 1994ರಿಂದ 2004ರವರೆಗೆ ಜಾಲ್ಸೂರು ಗ್ರಾಮದ ಬೊಳುಬೈಲು ಅಂಗನವಾಡಿ ಕಾರ್ಯಕರ್ತೆಯಾಗಿ ಹತ್ತು ವರ್ಷಗಳ ಸೇವೆ, 2004ರಿಂದ 2014ರವರೆಗೆ ಜಾಲ್ಸೂರು ಗ್ರಾಮದ ಕದಿಕಡ್ಕ ಅಂಗನವಾಡಿ ಕಾರ್ಯಕರ್ತೆಯಾಗಿ ಹತ್ತು ವರ್ಷಗಳ ಸೇವೆ, 2014ರಿಂದ 2024ರವರೆಗೆ ಹತ್ತು ವರ್ಷಗಳ ಕಾಲ ಜಾಲ್ಸೂರು ಗ್ರಾಮದ ಅಡ್ಕಾರು ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿ, ಅ.31ರಂದು ಸುದೀರ್ಘ 41 ವರ್ಷದ ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ.
ಇವರ ಪತಿ ಕೃಷ್ಣರಾಜ್ ಭಟ್ ಅವರು ನಿವೃತ್ತ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿದ್ದು, ಓರ್ವ ಪುತ್ರ ಶ್ರೀಕಾಂತ್ ಅವರು ಎಂ.ಎಸ್.ಡಬ್ಲ್ಯೂ. ವಿದ್ಯಾಭ್ಯಾಸ ಪೂರ್ತಿಗೊಳಿಸಿದ್ದಾರೆ.