ಕರ್ನಾಟಕದ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರು ಇವರು ನಡೆಸಿದ ಭರತನಾಟ್ಯ ಜೂನಿಯರ್
ಪರೀಕ್ಷೆಯಲ್ಲಿ ಕು. ಅನನ್ಯ- ಶೇ. 97.25 ಮತ್ತು ಕು. ಅಂಜನಾ ಶೇ. 94.75 ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಅನನ್ಯ ಸರಕಾರಿ ಪ್ರೌಢಶಾಲೆ ದುಗ್ಗಲಡ್ಕ ದಲ್ಲಿ 9ನೇ ತರಗತಿಯಲ್ಲಿ, ಹಾಗೂ ಅಂಜನಾ ಸ. ಹಿ. ಪ್ರಾ. ಶಾಲೆ ಕೊಯಿಕುಳಿಯಲ್ಲಿ 6 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಸುಳ್ಯ ದುಗ್ಗಲಡ್ಕ ದ ನೀರಬಿದಿರೆಯ ಶ್ರೀಮತಿ ಶೈಲಜ ಮತ್ತು ಜಯರಾಜ್ ಪಿ. ವಿ. ದಂಪತಿಗಳ ಪುತ್ರಿಯರಾಗಿರುವ ಇವರು, ಗಾನ ನೃತ್ಯ ಅಕಾಡೆಮಿ ಮಂಗಳೂರು ಇದರ ಸುಳ್ಯ ಶಾಖೆಯಲ್ಲಿ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಮತ್ತು ವಿದುಷಿ ಮಂಜುಶ್ರೀ ರಾಘವ್ ಇವರಲ್ಲಿ ಭರತನಾಟ್ಯವನ್ನು ಅಭ್ಯಸಿಸು ತಿದ್ದಾರೆ.