ಇತಿಹಾಸ ಪ್ರಸಿದ್ಧ ಸುಳ್ಯ ಶ್ರೀ ಚೆನ್ನಕೇಶವ ದೇವರ ಬ್ರಹ್ಮ ರಥೋತ್ಸವವು ಇಂದು ರಾತ್ರಿ ನಡೆಯಲಿದೆ.
ಡಾ.ಕೆ.ವಿ.ಚಿದಾನಂದ ಗೌಡ ಮತ್ತು ಮನೆಯವರು ಕೊಡುಗೆಯಾಗಿ ನೀಡಿದ ನೂತನ ಬ್ರಹ್ಮರಥದಲ್ಲಿ ಶ್ರೀ ಚೆನ್ನಕೇಶವ ದೇವರು ವಿರಾಜಮಾನರಾಗಿ
ಬ್ರಹ್ಮರಥವು ರಥಬೀದಿಯಲ್ಲಿರುವ ಕಟ್ಟೆಯ ತನಕ ಸಾಗಿ ಬರಲಿರುವುದು.
ಬಳಿಕ ನೂತನ ಕಟ್ಟೆಯಲ್ಲಿ ದೇವರಿಗೆ ವಿಶೇಷ ಪೂಜೆಯು ನೆರವೇರಲಿದೆ. ಈ ಸಂದರ್ಭದಲ್ಲಿ ವಿಶೇಷವಾಗಿ ಆಕರ್ಷಕ ಸಿಡಿಮದ್ದಿನ ಪ್ರದರ್ಶನ ನಡೆಯಲಿರುವುದು. ಈಗಾಗಲೇ ರಥ
ಕಟ್ಟುವ ಕಾಯಕವು ಪೂರ್ಣಗೊಂಡು ಬ್ರಹ್ಮ ರಥವು ದೇವಳದ ಮುಂಭಾಗದಲ್ಲಿ ಕಂಗೊಳಿಸುತ್ತಿದೆ.
ರಾತ್ರಿ ನಡೆಯುವ ಬ್ರಹ್ಮರಥವನ್ನು ವೀಕ್ಷಿಸಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದೆ.