ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಕೊಯಿಕುಳಿ ವಾರ್ಡ್ ನ ಕೊಯಿಕುಳಿ ಶಾಲಾ ವಠಾರ ನೀರಬಿದಿರೆ ಪ್ರದೇಶದ ಸುಮಾರು 30 ಮನೆಗಳಿಗೆ ಟೌನ್ ಫೀಡರ್ ನಿಂದ ಸಂಪರ್ಕ ಕಲ್ಪಿಸುವ ಕಾರ್ಯಕ್ಕೆ ಜ.10ರಂದು ಚಾಲನೆ ನೀಡಲಾಯಿತು.
ಕೊಯಿಕುಳಿ ಶಾಲಾ ಬಳಿ ನಿರ್ಮಿಸಲಾದ ನೂತನ ಟಿ.ಸಿ.ಬಳಿಯಲ್ಲಿ
ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್ ಚಾಲನೆ ನೀಡಿ ಮಾತನಾಡಿ 2013ರಲ್ಲಿ ಈ ಯೋಜನೆ ಮಂಜೂರಾಗಿದ್ದು,ಅದು ಕಾರ್ಯಾಗತವಾಗಲಿಲ್ಲ.2023ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರ ನೇತೃತ್ವದಲ್ಲಿ ಸುಳ್ಯದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಶಶಿಧರ ಎಂ.ಜೆ.ಯವರು ಸಚಿವರಿಗೆ ಮನವಿ ನೀಡಿ ಒತ್ತಾಯಿಸಿದರು. ಬಳಿಕ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ನಾನು ವಿದ್ಯುತ್ ಸಚಿವರಾದ ಕೆ.ಜೆ.ಜಾರ್ಜ್ ರವರನ್ನು ಕಂಡು ಒತ್ತಡ ಹಾಕಿ ಶೀಘ್ರವಾಗಿ ಕೆಲಸವಾಗುವಂತೆ ಆಯಿತು ಎಂದು ಹೇಳಿದರು.
ತಾ.ಪಂ.ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಮಾತನಾಡಿ ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ಹೇಳಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ.ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ನಗರ ಪಂಚಾಯತ್ ನಾಮ ನಿರ್ದೇಶನ ಸದಸ್ಯ ಭಾಸ್ಕರ ಪೂಜಾರಿ ಬಾಜಿನಡ್ಕ,ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಭವಾನಿಶಂಕರ ಕಲ್ಮಡ್ಕ, ಸುಳ್ಯ ಇಂಟೆಕ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಚಂದ್ರನ್ ಕೂಟೇಲು, ನಾರಾಯಣ ಟೈಲರ್, ಮಂಜುನಾಥ ಕಂದಡ್ಕ, ಹಸೈನಾರ್ ಕೊಳಂಜಿಕೋಡಿ,ಪರಮೇಶ್ವರ ನಾಯ್ಕ್ ನೀರಬಿದಿರೆ,ಇಬ್ರಾಹಿಂ ನೀರಬಿದಿರೆ, ನಾರಾಯಣ ನೀರಬಿದಿರೆ, ಅರುಣಾಚಲ ಕೂಟೇಲು, ವೆಂಕಟ್ರಮಣ ಇಟ್ಟಿಗುಂಡಿ, ಸುರೇಶ್‌ಕುಮಾರ್ ಕಂದಡ್ಕ, ಬಾಲಸುಬ್ರಹ್ಮಣ್ಯ, ಯತೀಶ್ ಹಿರಿಯಡ್ಕ ಮೊದಲಾದವರು ಉಪಸ್ಥಿತರಿದ್ದರು.
ಸ್ಥಳೀಯ ಪಂಚಾಯತ್ ಸದಸ್ಯನ ಅವಗಣನೆಗೆ ಬಾಲಕೃಷ್ಣ ರೈ ಅಸಮಾಧಾನ
ಟೌನ್ ಫೀಡರ್ ನ ವಿಸ್ತೃತ ಕಾರ್ಯಾರಂಭ ಕಾರ್ಯಕ್ರಮಕ್ಕೆ ಕರೆಯದಿರುವುದಕ್ಕೆ ಕೊಯಿಕುಳಿ ವಾರ್ಡ್ ನ ನಗರ ಪಂಚಾಯತ್ ಸದಸ್ಯ ಬಾಲಕೃಷ್ಣ ರೈ ದುಗ್ಗಲಡ್ಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಯೊಂದಿಗೆ ಮಾತನಾಡಿದ ಅವರು ಈ ಯೋಜನೆ ಆಗಬೇಕೆಂದು ಸುಳ್ಯದ ಮೆಸ್ಕಾಂನ ಹರೀಶ್ ನಾಯ್ಕ್ ರವರು ಜೆಇ ಆಗಿದ್ದಾಗ ಮಾತನಾಡಿದ್ದೇನೆ.ಆ ಬಳಿಕ ಎಇಇ ಆಗಿದ್ದ ರಾಮಚಂದ್ರ ರವರನ್ನು ಭೇಟಿಯಾಗಿ ಮಾತನಾಡಿ ತಕ್ಷಣ ಆಗಬೇಕೆಂದು ಮನವಿ ಮಾಡಿದ್ದೆ. ನಾನು ಮಾಡಿದ ಪ್ರಯತ್ನವನ್ನು ಕಡೆಗಣಿಸಿ,ನನಗೆ ಹೇಳದೆ ಸುಳ್ಯದವರನ್ನು ಕರೆತಂದು ಉದ್ಘಾಟನೆ ಮಾಡಿ ನನ್ನನ್ನು ಕಡೆಗಣಿಸಿದ್ದಾರೆ.ಇಂತಹ ರಾಜಕೀಯ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.