ಸುಳ್ಯದ ಗಾಂಧಿನಗರ ವಿಷ್ಣುಸರ್ಕಲ್ ಬಳಿ ಗಾಯತ್ರಿ ಎಸ್.ರಾವ್ ರವರ ಮಾಲಕತ್ವದ ಪಯಸ್ವಿನಿ ಹಾರ್ಡ್ ವೇರ್ಸ್ ಜ.11 ರಂದು ಶುಭಾರಂಭಗೊಂಡಿತು.
ಹಿರಿಯರು,ಕಟ್ಟಡ ಮಾಲಕರಾದ ಜನಾರ್ದನ ಗೌಡ ಸೂಂತೋಡುರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ನಿವೃತ್ತ ಫಾರೆಸ್ಟರ್ ನಾರಾಯಣ ರೈ,ರಾಮಕೃಷ್ಣ ರೈ,ಪಯಸ್ವಿನಿ ಎಂಟರ್ ಪ್ರೈಸಸ್ ಮಾಲಕ ಸುಧಾಕರ ಪರಿವಾರಕಾನ, ಪುರುಷೋತ್ತಮ್,ಸತೀಶ್ಚಂದ್ರ ಪರಿವಾರಕಾನ,ಸುಜಾತ ರಾಮಕೃಷ್ಣ ರೈ, ಜಲಜಾಕ್ಷಿ ರಾಮಕೃಷ್ಣ ರಾವ್,ನಾರಾಯಣ ಶಾಂತಿನಗರ,ನಾಗರಾಜ್,ಪ್ರಶಾಂತ್,ರಮೇಶ್ ,ಪುರುಷೋತ್ತಮ,ಸಂದೇಶ್ ಸೂಂತೋಡು,ರಾಮಚಂದ್ರ,ಪದ್ಮನಾಭ ರಾವ್ , ಪ್ರಶಾಂತ್ ಆಚಾರ್ಯ,ಕಿರಣ್ ಪರಿವಾರಕಾನ,ವೆಂಕಟ್ರಮಣ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿ ಪತ್ರಿಕೆ ವರದಿಗಾರ ಗಣೇಶ್ ಕುಕ್ಕುದಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಇಲ್ಲಿ ಮೋರಿ ಪೈಪು,ಪಿ.ವಿ.ಸಿ.ಪೈಪು,ಬೇಲಿ ಬಲೆ,ಮರಳು,ಜಲ್ಲಿ,ಡ್ರಿಪ್ ಐಟಂಗಳು,ಮಡ್ ಬ್ಲಾಕ್,ಸಿಮೆಂಟ್ ಉತ್ಪನ್ನಗಳು ದೊರೆಯುತ್ತದೆ.
ಶುಭಾರಂಭದ ಪ್ರಯುಕ್ತ ವಾಟರ್ ಟ್ಯಾಂಕ್ ,ಮೋರಿ ಪೈಪು ಅತೀ ಕಡಿಮೆ ದರದಲ್ಲಿ ನೀಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.