ಸಿದ್ಧತೆಗಾಗಿ ನಡೆಯಿತು 5 ತಂಡಗಳಿಗೆ 60 ಕ್ಕೂ ಹೆಚ್ಚು ಆಟಗಾರರ ಬಿಡ್ಡಿಂಗ್
ಸುಳ್ಯ ಫುಟ್ಬಾಲ್ ಪೆವಿಲಿಯನ್ ವಾಟ್ಸಪ್ ಗ್ರೂಪ್ ಇದರ ಆಶ್ರಯದಲ್ಲಿ ನ. 10 ಕ್ಕೆ ಗಾಂಧಿನಗರ ಕೆ ಪಿ ಎಸ್ ಮೈದಾನದಲ್ಲಿ ಚಾಂಪಿಯನ್ ಲೀಗ್ ಸೀಶನ್ 2 ಫುಟ್ಬಾಲ್ ಪಂದ್ಯಾಟ ನಡೆಯಲಿದೆ.
ಇದರ ಅಂಗವಾಗಿ ಅ 27 ರಂದು ಸುಳ್ಯ ಪಾರಿವಾರಕಾನದ ಗ್ರಾಂಡ್ ಪರಿವಾರ್ ಸಭಾಂಗಣದಲ್ಲಿ ಸುಳ್ಯದ ಖ್ಯಾತ ಫುಟ್ಬಾಲ್ ಆಟಗಾರ ಮತ್ತು ತರಬೇತುದಾರ ಮುನಾಫರ್ ಎಂ ಎಸ್ ರವರ ನೇತೃತ್ವದಲ್ಲಿ ಆಟಗಾರರ ಬಿಡ್ಡಿಂಗ್ ಸರ್ಮನಿ ನಡೆಯಿತು. ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಮಾದರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಂಪ್ಯೂಟ್ರೈಸ್ ಸಿಸ್ಟಮ್ ಪ್ರೊಜೆಕ್ಟರ್ ಸ್ಕ್ರೀನ್ ಅಳವಡಿಸಿ ಆಟಗಾರರ ಭಾವಚಿತ್ರ ಪ್ರದರ್ಶಿಸಿ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ಪಂದ್ಯಾಕೂಟದಲ್ಲಿ ಖ್ಯಾತ 5 ತಂಡಗಳು ಭಾಗವಹಿಸುತ್ತಿದ್ದು ಶೂಟರ್ ಕಟ್ಟೆಕ್ಕಾರ್ಸ್ ತಂಡದ ಮಾಲಕ ಫೈಝಲ್ ಕಟ್ಟೆಕ್ಕಾರ್ಸ್,ರೋಸಿ ಎಫ್ ಸಿ ತಂಡದ ಮಾಲಕ ಅಬ್ದುಲ್ ಶಮಿರ್ (ಚಮ್ಮು )ರೋಯಲ್ ಸ್ಪೋರ್ಟ್ಸ್ ಮತ್ತು ಆರ್ಟ್ಸ್ ತಂಡದ ಮಾಲಕ ಸಾಜೀದ್ ಗೂನಡ್ಕ,ಗಲ್ತಾನ್ ಎಫ್ ಸಿ ತಂಡದ ಮಾಲಕ ರಂಶಾದ್ ಅಂಚು ಬೇಝ್ ಎಫ್ ತಂಡದ ಮಾಲಕ ಅನುಷ್ ಮತ್ತು ತಂಡದವರು ಬಿಡ್ಡಿಂಗ್ ನಲ್ಲಿ ಭಾಗವಹಿಸಿ ಆಟಗಾರನ್ನು ಆಯ್ಕೆ ಮಾಡಿದರು.
ಕರ್ನಾಟಕ ಹಾಗೂ ಕೇರಳ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 60 ಕ್ಕೂ ಹೆಚ್ಚು ಆಟಗಾರರು ಬಿಡ್ಡಿಂಗ್ ನಲ್ಲಿ ಭಾಗವಹಿಸಿದ್ದರು.
ಈ ಸಂಧರ್ಭ ಶಾಲು ಫಿಝಿಯೋ ಕೆ ವಿ ಜಿ, ಸಿಬ್ಲಿ ವೆಲ್ ಕಮ್, ಫಾಝಿಲ್ ನಾವೂರು, ಸಾಝಿಲ್ ಕುಂಬರ್ಚೋಡು, ನಿಯಾಜ್, ಸಲ್ಮಾನ್ ಫಾರೀಶ್ ಸಹಕಾರ ನೀಡಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಂಘಟಕ ಮುನಾಫರ್ ಎಂ ಎಸ್ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ,ಸುದ್ದಿ ಪತ್ರಿಕೆಯ ವರದಿಗಾರರಾದ ಶರೀಫ್ ಜಟ್ಟಿಪಳ್ಳ, ಹಸೈನಾರ್ ಜಯನಗರ, ಆಂಬುಲೆನ್ಸ್ ಚಾಲಕ ಮಾಲಕ ಸಂಘದ ಉಪಾಧ್ಯಕ್ಷ ಉನೈಸ್ ಪೆರಾಜೆ,ಉದ್ಯಮಿ ಬಾತಿಶ ನಾವೂರು ಉಪಸ್ಥಿತರಿದ್ದು ಕಾರ್ಯಕ್ರಮದ ಬಗ್ಗೆ ಮಾತನಾಡಿ ಶುಭಾರೈಸಿದರು.
ವೇದಿಕೆಯಲ್ಲಿ ಶಫೀಕ್ ಗಾಂಧಿನಗರ, ಹಬೀಬ್ ಗಾಂಧಿನಗರ, ಅಶ್ರಫ್ ಅಚ್ಚು ಜಟ್ಟಿಪಳ್ಳ,ಮೊದಲಾದವರು ಉಪಸ್ಥಿತರಿದ್ದರು.
ಸುಮಾರು 4 ಗಂಟೆಗಳ ಬಿಡ್ಡಿಂಗ್ ಪ್ರಕ್ರಿಯೆ ನಡೆದು ಅಂತಿಮವಾಗಿ ಅತಿ ಹೆಚ್ಚು ಮೊತ್ತಕ್ಕೆ 3350₹ ನೌಶಾದ್ ಕಲ್ಲು ಮುಟ್ಲು, 3250₹ ಸುಹೈಬ್ ಕುಂಬರ್ಚೋಡು, 2750₹ ಮಿಸ್ಬಾನ್ ಅರಂತೋಡು,2250₹ ಚಪ್ಪು ಕಾಸರಗೋಡು, 2450₹ ರಕ್ಷಿತ್ ಪುತ್ತೂರು ಆಯ್ಕೆಯಾದರು.
ನಿರೂಪಕ ನಿಝಾರ್ ಶೈನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.