ಆಕರ್ಷಕ ಲೈಟಿಂಗ್ಸ್ ಹಾಗೂ ಪೆಂಡಾಲ್ ನಿರ್ಮಾಣ- ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ
ನಾಡಿನ ಅತ್ಯಂತ ದೊಡ್ಡ ಹಾಗೂ ವಿಜೃಂಭಣೆಯಿಂದ ಆಚರಿಸಲ್ಪಡುವ ಹಬ್ಬ ದೀಪಾವಳಿ. ದೀಪಾವಳಿ ಬಂತೆಂದರೆ ಪಟಾಕಿಯ ಸದ್ದುಕೇಳಲೆಬೇಕು.
ಇದೀಗ ಸುಳ್ಯದ ಚೆನ್ನಕೇಶವ ದೇವಸ್ಥಾನದ ಕೆಳ ಭಾಗದ ಪ್ರಭು ಮೈದಾನದಲ್ಲಿ ಪಟಾಕಿ ಅಂಗಡಿಗಳು ಸಾಲಾಗಿ ತೆರೆಯಲ್ಪಟ್ಟಿದ್ದು ಇಂದಿನಿಂದ ಪಟಾಕಿ ವ್ಯಾಪಾರ ಆರಂಭಗೊಂಡಿದೆ.
ಪಟಾಕಿ ವ್ಯಾಪಾರಿಗಳು ಒಟ್ಟು ಸೇರಿ ಚೆನ್ನಕೇಶವ ದೇವರ ಹೆಸರಿನ ಅಂಗಡಿಯನ್ನು ತೆರೆಯಲಾಗಿದ್ದು ಒಂದೇ ಕಡೆಯಲ್ಲಿ 5-6 ಕೌಂಟರ್ ಗಳಲ್ಲಿ ವ್ಯಾಪಾರಗಳು ನಡೆಯುತ್ತಿದೆ. ಪಟಾಕಿ ಖರೀದಿಗೆ ಬರುವ ಗ್ರಾಹಕರಿಗೆ ಪಾರ್ಕಿಂಗ್ ವ್ಯವಸ್ಥೆ ಹಾಗೂ ರಥಬೀದಿಯಿಂದ ಪ್ರಭು ಮೈದಾನದ ತನಕ ಆಕರ್ಷಕ ಲೈಟಿಂಗ್ಸ್ ವ್ಯವಸ್ಥೆ ಮಾಡಲಾಗಿದೆ. ಆಕಸ್ಮತ್ತಾಗಿ ಮಳೆ ಬಂದರೂ ಅಡಚಣೆಯಾಗದಂತೆ ಶೀಟ್ ಅಳವಡಿಸಿ ಸುಂದರವಾದ ಪೆಂಡಾಲ್ ನಿರ್ಮಿಸಲಾಗಿದೆ.
ಈ ಬಾರಿಯ ಪಟಾಕಿ ವ್ಯಾಪಾರದಲ್ಲಿ ಬಹಳಷ್ಟು ಮಂದಿ ಯುವಕರು ಆಸಕ್ತಿ ವಹಿಸಿರುತ್ತಾರೆ.