ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ ಗೋಪೂಜೆ ಆಚರಣೆ

0

ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ ದೀಪಾವಳಿಯ ಪ್ರಯುಕ್ತ ಗೋಪೂಜೆಯನ್ನು ಆ.30ರಂದು(ಇಂದು) ಆಚರಿಸಲಾಯಿತು.


ಹಿಂದೂ ಸಂಸ್ಕೃತಿಯ ಪ್ರಕಾರ ಗೋವುಗಳ ಮಹತ್ವ ತಿಳಿಸುವಂತೆ, ಶಾಲೆಯಲ್ಲಿ ಗೋವನ್ನು ಜಳಕ ಮಾಡಿಸಿ, ಹೂಹಾರ ಹಾಕಿ, ಅರಸಿನ ಕುಂಕುಮ ಹಚ್ಚಿ ದೀಪಾರತಿ ಬೆಳಗಿಸಿ ಹಣ್ಣು – ಹಂಪಲುಗಳನ್ನು ನೀಡಲಾಯಿತು. ಗೋಮಾತೆಗೆ ಪ್ರದಕ್ಷಿಣೆ ಮಾಡಿದರೆ ತ್ರಿಲೋಕ ಪ್ರದಕ್ಷಿಣೆ ಮಾಡಿದ ಪುಣ್ಯ ಸಿಗುತ್ತದೆ ಎಂಬಂತೆ ಆಚರಿಸಲಾಯಿತು. ಶಾಲೆಯಲ್ಲಿ ಆಡಳಿತ ಮಂಡಳಿಯವರು, ಶಿಕ್ಷಕರು, ವಿದ್ಯಾರ್ಥಿಗಳು ಪ್ರದಕ್ಷಿಣೆ ಹಾಕಿ ಆಶೀರ್ವಾದ ಪಡೆದುಕೊಂಡರು.


ಈ ಸಂದರ್ಭದಲ್ಲಿ ಆಂಗ್ಲ ಭಾಷಾ ಶಿಕ್ಷಕ ಅಚ್ಯುತ ಅಟ್ಲೂರು ರವರು ವಿದ್ಯಾರ್ಥಿಗಳಿಗೆ ದೀಪಾವಳಿ ಹಾಗೂ ಗೋ ಪೂಜಾ ಮಹತ್ವವನ್ನು ಕಥೆಯ ಮೂಲಕ ತಿಳಿಸಿದರು ಹಾಗೂ ವಿದ್ಯಾರ್ಥಿಗಳು ದೀಪಾವಳಿಯ ದಿನ ಮನೆಯಲ್ಲಿ ಹೇಗೆ ದೀಪಾವಳಿಯನ್ನು ಆಚರಿಸಬೇಕೆಂದು ತಿಳಿ ಹೇಳಲಾಯಿತು. ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯವರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಗದಾಧರ ಬಾಳುಗೋಡು ಸ್ವಾಗತಿಸಿ ವಂದಿಸಿದರು.