ಗುತ್ತಿಗಾರು ಗ್ರಾಮದ ವಳಲಂಬೆ ಶ್ರೀ ಶಂಖಚೂಡ ಕ್ಷೇತ್ರದಲ್ಲಿ ಸೇವಾ ಟ್ರಸ್ಟ್, ಜೀರ್ಣೋದ್ಧಾರ ಸಮಿತಿ, ಭಕ್ತಾಭಿಮಾನಿಗಳ ಸಭೆಯು ಅನುವಂಶೀಯ ಅಧ್ಯಕ್ಷರಾದ ಮಣಿಯಾನ ಪುರುಷೋತ್ತಮ ಇವರ ಅಧ್ಯಕ್ಷತೆಯಲ್ಲಿ ಅ.30 ರಂದು ಜರುಗಿತು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಹಿರಿಯರಾದ ಮಣಿಯಾನ ಸುಬ್ಬಣ್ಣ ಗೌಡರು ದೀಪಹಚ್ಚಿ ಮನವಿ ಪತ್ರವನ್ನು ಬಿಡುಗಡೆಗೊಳಿಸಿದರು. ನಂತರ ಈವರೆಗಿನ ಜಮಾ ಖರ್ಚು ಗಳನ್ನು ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಯಿತು.
ಮುಂದಿನ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.
ಪೂರ್ಣಚಂದ್ರ ಬೊಮ್ಮದೇರೆ ಪ್ರಾರ್ಥನೆ ಗೈದರು . ಜೀರ್ಣೊದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಲೋಕೇಶ್ವರ ಡಿ.ಆರ್. ಕಾರ್ಯಕ್ರಮ ನಿರೂಪಿಸಿದರು. ಮಣಿಯಾನ ಪುರುಷೋತ್ತಮರು ಸ್ವಾಗತಿಸಿ, ಟ್ರಸ್ಟ್ ಕಾರ್ಯದರ್ಶಿ ಪಿ. ಆರ್. ಕಿಶೋರ್ ಕುಮಾರ್ ವಂದಿಸಿದರು.