ಪ್ರೀತಿಗೆ ಯುವತಿಯ ಸಮ್ಮತಿ ಇದ್ದರೂ ಆಕೆಯ ಮನೆಯವರು ವಿರೋಧಿಸುತ್ತಿರುವುದಾಗಿಯೂ ಇದೀಗ ಜೀವ ಬೆದರಿಕೆ ಒಡ್ಡಿದ್ದಾರೆಂದು ಯುವಕನೊಬ್ಬ ಸುಳ್ಯ ಪೋಲೀಸ್ ಠಾಣೆ ಮಟ್ಟಿಲೇರಿದ ಘಟನೆ ವರದಿಯಾಗಿದೆ.
ಅಜ್ಜಾವರ ಗ್ರಾಮದ 22 ವರ್ಷ ಯುವತಿ ಹಾಗೂ ಪುತ್ತೂರು ಕೊಳ್ತಿಗೆಯ ಕೊಂರ್ಭಡ್ಕ ಚಂದ್ರಶೇಖರ (28) ಪರಸ್ಪರ ಪ್ರೀತಿಸುತಿದ್ದರೆಂದೂ ಇದಕ್ಕೆ ಯುವತಿಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದರೆನ್ನಲಾಗಿದೆ.
ಅ.31ರಂದು ಬೆಳಗ್ಗೆ ಯುವಕ ಹಾಗೂ ಮನೆಯವರು ಯುವತಿಯನ್ನು ಮದುವೆ ಮಾಡಿ ಕೊಡುವಂತೆ ಕೇಳಲು ಹೋದಾಗ ಯುವತಿಯ ತಂದೆ ಯುವತಿಗೆ ಹೊಡೆದರೆಂದೂ, ಯುವಕನಿಗೆ ಜೀವ ಬೆದರಿಕೆ ಹಾಕಿದರೆಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದೀಗ ಯುವಕನ ಕಡೆಯುವರು ಹಾಗೂ ಯುವತಿಯ ಕಡೆಯವರು ಸುಳ್ಯ ಪೋಲೀಸ್ ಠಾಣೆಯಲ್ಲಿದ್ದಾರೆಂದು ತಿಳಿದುಬಂದಿದೆ