ಒಡಬಾಯಿ ತೂಗು ಸೇತುವೆ ವೀಕ್ಷಣೆಗೆ ಸುಳ್ಯ ನ.ಪಂ. ನ ಕಾಂಗ್ರೆಸ್ ಸದಸ್ಯರು ಭೇಟಿ

0

ಸುಳ್ಯ ಮಾಣಿ ಮೈಸೂರು ಹೆದ್ದಾರಿ ಬಳಿ ಒಡಬಾಯಿಯಿಂದ ದೊಡ್ಡೇರಿ ಸಂಪರ್ಕಿಸುವ ತೂಗು ಸೇತುವೆಯ ತಡೆ ಬೇಲಿಯ ಸುಮಾರು ಭಾಗ ಮುರಿದು ಬಿದ್ದಿದ್ದು ಇದರ ವೀಕ್ಷಣೆಗೆ ನ.5 ರಂದು ಸುಳ್ಯ ನಗರ ಪಂಚಾಯತ್ ನ ಕಾಂಗ್ರೆಸ್ ಸದಸ್ಯರ ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ತೂಗು ಸೇತುವೆಯ ಆರಂಭ ಭಾಗದಲ್ಲಿ ಸುಮಾರು ದೂರ ದ ವರೆಗೆ ತಡೆ ಬೇಲಿಯ ತಂತಿ ಮುರಿದು ಬಿದ್ದಿರುವ ಮತ್ತು ಇದರಿಂದ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ಆತಂಕ ವ್ಯಕ್ತ ಪಡಿಸಿದರು.

ಈ ವೇಳೆ ಮಾತನಾಡಿದ ಎಂ.ವೆಂಕಪ್ಪ ಗೌಡರು ಈ ರೀತಿಯ ಅವ್ಯವಸ್ಥೆ ತುಂಬಾ ಅಪಾಯಕಾರಿ. ಏಕೆಂದರೆ ಈ ಭಾಗದಲ್ಲಿ ನೂರಾರು ಜನರು ವಿಶೇಷವಾಗಿ ಸಣ್ಣ ಸಣ್ಣ ಶಾಲಾ ಮಕ್ಕಳು ನಡೆದಾಡುವ ಜಾಗ ವಾಗಿದ್ದು ಇಲ್ಲಿಯ ಸಮಸ್ಯೆ ಬಗ್ಗೆ ಅನೇಕ ಭಾರಿ ಪತ್ರಿಕೆ, ಮಾಧ್ಯಮಗಳು ವರದಿ ಮಾಡಿದೆ. ಆದರೆ ಇದಕ್ಕೆ ಸಂಭಂದ ಪಟ್ಟವರು ಇತ್ತ ಗಮನ ಹರಿಸದೇ ಇರುವುದು ಸರಿಯಲ್ಲ. ಜನರ ಉಪಯೋಗಕ್ಕಾಗಿ ಮಾಡಿರುವ ಈ ವ್ಯವಸ್ಥೆಯನ್ನು ಉಳಿಸಿಕ್ಕೊಂಡು ಹೋಗಬೇಕಾಗಿದ್ದು ಅಧಿಕಾರಿಗಳ, ಮತ್ತು ಜನಪ್ರತಿನಿಧಿಗಳ ಕರ್ತವ್ಯವಾಗಿದ್ದು ಈ ಬಗ್ಗೆ ಸಂಭಂದಪಟ್ಟವರ ಗಮನಕ್ಕೆ ತರವುದಾಗಿ ತಿಳಿಸಿದರು.

ಈ ಸಂಧರ್ಭದಲ್ಲಿ ನ.ಪಂ ಸದಸ್ಯರುಗಳಾದ ಶರೀಫ್ ಕಂಠಿ,ಧೀರಾ ಕ್ರಾಸ್ತಾ, ನಾಮ ನಿರ್ದೇಶಕ ಸದಸ್ಯರುಗಳಾದ ಸಿದ್ದೀಕ್ ಕೊಕ್ಕೊ, ರಾಜು ಪಂಡಿತ್,ಭಾಸ್ಕರ್ ಪೂಜಾರಿ,ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.