ದೀಪಾವಳಿ

0

ದೀಪೋತ್ಸವ ಇಂದು ದೀಪೋತ್ಸವ..
ಸಾಲು ಹಣತೆ ಹಚ್ಚಿ ಬೆಳಗುವ…
ಮನದ ದುಗುಡವನ್ನು ಕಳೆಯುವ
ಅಸೂಯೆ, ಅಸಹ್ಯ, ದ್ವೇಷವೆಲ್ಲ ದೂರ ಮಾಡುವ!
ಜ್ಞಾನವೆಂಬ ದೀವಿಗೆಯನ್ನು ಬೆಳಗುವ
ಮನದ ಅಂಧಕಾರ ತೊರೆದು ಮನೆಯ ಬೆಳಗುವ
ಮನೆ ಮಂದಿ ಎಲ್ಲ ಒಟ್ಟು ಸೇರುವ
ಸಿಹಿಯ ಹಂಚಿ ಕಹಿಯ ಮರೆತು ಸವಿಯ ಸವಿಯುವ!
ಸ್ವಚ್ಚಮನಸ್ಸಿನಿಂದ ಇಂದೆ ಶುದ್ಧ ಜಲವ ತುಂಬುವ
ಅಭ್ಯಂಜನದೊಡನೆ ನರಕ ಚತುರ್ದಶಿ ಕಳೆಯುವ
ಲಕ್ಷ್ಮಿ ಪೂಜೆ ಗೈದು ದೀಪಾವಳಿ ಹಬ್ಬ ಮಾಡುವ
ಗೋಮಾತೆಗೆ ಆರತಿ ಬೆಳಗಿ ಒಳಿತು ಕಾಣುವ
ಹೊಸ ಬಟ್ಟೆಯನ್ನು ಧರಿಸಿ ನಲಿಯುವ
ಎಚ್ಚರಿಕೆಯಿಂದ ಪುಟಾಣಿಗಳೇ ಪಟಾಕಿ ಹಚ್ಚುವ!
ನಮ್ಮ ಹಬ್ಬ ನಮ್ಮ ಹೆಮ್ಮೆಯಿಂದ ಮೆರೆಯುವ
ದೀಪದಿಂದ ದೀಪ ಹಚ್ಚಿ ಪ್ರೀತಿ ಹಂಚುವ!
ದೀಪಾವಳಿಯ ಸಡಗರದಲ್ಲೇ ಕನ್ನಡದ ದೀಪ ಹಚ್ಚುವ
ನಾಡು, ನುಡಿ,ಸಂಸ್ಕೃತಿಯ ಮರೆಯದೇ ಇರುವ!
ಕರುನಾಡ ಹಬ್ಬವಿದು ಗೌರವದಿಂದ ಕಾಣುವ
ಬಂಧು, ಬಳಗ,ಪರಿವಾರದಲ್ಲಿ ಬಾಂಧವ್ಯ ಬೆಸೆಯುವ!
ಮಾನವತೆಯ ದೀಪವನ್ನು ನಾವು ಹಚ್ಚುವ
ಪರಿಸರವಾದಿ ಕಾಯಕವನ್ನೆ ಮಾಡುವ
ನಾಳೆಯ ಜನತೆಗಾಗಿ ದೀಪ ಬೆಳಗುವ
ಸುಖ, ಶಾಂತಿ, ನೆಮ್ಮದಿಗಾಗಿ ದೇವರಲ್ಲಿ ಬೇಡುವ!

ಶ್ರೀಮತಿ ಸರಿತಾಪ್ರವೀಣ್
ರೋಟರಿ ಪದವಿ ಪೂರ್ವ ಕಾಲೇಜು,ಸುಳ್ಯ