ಸುಳ್ಯ ಸಂತ ಜೋಸೆಫ್ ಆಂಗ್ಲಮಾಧ್ಯಮ ಶಾಲೆಯಲ್ಲಿ 69ನೇ ಕನ್ನಡ ರಾಜ್ಯೋತ್ಸವವನ್ನು ನ.01 ರಂದು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಸಂಚಾಲಕರಾದ ರೆ. ಫಾ. ವಿಕ್ಟರ್ ಡಿಸೋಜಾ ರವರು ಧ್ವಜಾರೋಹಣ ನೆರವೇರಿಸಿ ಕನ್ನಡ ನಾಡು ಮತ್ತುನುಡಿಯ ಮಹತ್ವ ದ ಬಗ್ಗೆ ತಿಳಿಸಿದರು. ಮುಖ್ಯ ಅತಿಥಿ ಶ್ರೀಮತಿ ಕುಸುಮಾವತಿ ನಿವೃತ ಉಪನ್ಯಾಸಕರು ಎನ್. ಎಮ್. ಪಿಯು ಕಾಲೇಜು ಆರಂತೋಡು ರವರು ಕನ್ನಡ ರಾಜ್ಯೋತ್ಸವದ ಮಹತ್ವ ವನ್ನು ತಿಳಿಸಿದರು ಅಲ್ಲದೆ ಪ್ರೌಢಶಾಲಾ ಪೋಷಕ ಸಮಿತಿಯ ಉಪಾಧ್ಯಕ್ಷರಾದ ಹೇಮನಾಥ್ ಕೊಡಿಯಾಲ್ ಬೈಲ್ ಇವರು ಶುಭ ಹಾರೈಸಿದರು. ವೇದಿಕೆಯಲ್ಲಿ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ಟೆಲ್ಲಾ, ಶಶಿಧರ್ ಎಂ. ಜೆ, ಪ್ರಬೋಧ್ ಶೆಟ್ಟಿ, ಶ್ರೀಮತಿ ಜ್ಯೋತಿ, ಶ್ರೀಮತಿ ದೇವಿಲತಾ ರವರು ಉಪಸ್ಥಿತರಿದ್ದರು.ಕು.ಫಾತಿಮಾತ್ ಅರ್ಪಿಯ ಸ್ವಾಗತಿಸಿ, ಕು. ಸಾನ್ವಿ ವಂದಿಸಿದರು. ಕು.ಹೈನಾ ಹಾಗೂ ಕು. ಅನುಜ್ಞ ಕಾರ್ಯಕ್ರಮವನ್ನು ನಿರೂಪಿಸಿದರು. 8 ನೇ ತರಗತಿಯ ವಿಧ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದಂತ ಎಲ್ಲರಿಗೂ ಸಿಹಿತಿಂಡಿ ಯನ್ನು ವಿತರಿಸಲಾಯಿತು.