ದುಬೈಯಲ್ಲಿ ಅನಿವಾಸಿ ಭಾರತೀಯರ ಅರಂತೋಡು ಕುಟುಂಬ ಸಮ್ಮಿಲನ ಮತ್ತು ಸನ್ಮಾನ ಸಮಾರಂಭವು ನ. 7ರಂದು ದುಬೈಯ ಅಲ್ ತವಾರ್ ಪಾರ್ಕ್ ಯಲ್ಲಿ ನಡೆಯಿತು.
ಸಮ್ಮಿಲನದ ಮುಖ್ಯ ಆಕರ್ಷಣೆಯಾಗಿ ಅಲ್ಪ ದಿವಸದ ಮಾಯಾ ನಗರಿ ದುಬೈಯ ವೀಕ್ಷಣೆಗೆ ಬಂದಿದ್ದ ಅರಂತೋಡು ಪಾರೆಕ್ಕಲ್ ಕಮಾಲ್,ಮತ್ತು ಯುವ ಉದ್ಯಮಿ, ಸಮಾಜ ಸೇವಕ ಡಾ ಇಸ್ಮಾಯಿಲ್ ಸರ್ಫ್ರಾಜ್ ಅವರಿಗೆ ಸನ್ಮಾನ ನೆರವೇರಿಸಲಾಯಿತು.
ಅರಂತೋಡು ದುಬೈ ಜಮಾಅತ್ ನ ಅಧ್ಯಕ್ಷ ಮುಕ್ತಾರ್ ಪಟೇಲ್ ಹಾಗೂ ಅರಂತೋಡು ಕಮಿಟಿಯ ನಿರ್ದೇಶಕ ಸರ್ಫರಾಜ್ ನವಾಜ್ ಅವರು ಯುವ ಉದ್ಯಮಿ ಡಾ. ಇಸ್ಮಾಯಿಲ್ ಸರ್ಫರಾಜ್ ಅವರನ್ನು ಶಾಲು ಮತ್ತು ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಕುಟುಂಬ ಸದಸ್ಯರು ಹಾಗೂ ಸೌದಿ ಸಮಿತಿಯ ಸದಸ್ಯರಾದ ಕಮಾಲ್ ಪಾರೆಕ್ಕಲ್ ಅವರನ್ನು ಅರಂತೋಡು ದುಬೈ ಸಮಿತಿಯ ಸದಸ್ಯರಾದ ರಿಪಾಯಿ ಪಟೇಲ್ ಹಾಗೂ ಅಶ್ರಫ್ ಆದೂರ್ ಅವರು ಶಾಲು ಮತ್ತು ಸ್ಮರಣ ಚಿಹ್ನೆಯನ್ನು ನೀಡಿ ಸನ್ಮಾನಿಸಿದರು.
ಕಮಾಲ್ ಪಾರೆಕ್ಕಲ್ ಅವರ ಮಾವ ಅಬ್ದುಲ್ ರಹಿಮಾನ್ ಅತೂರ್ ಅವರನ್ನು ನಾಸಿರ್ ಪಟೇಲ್ ಹಾಗೂ ಸೈಫುದ್ದೀನ್ ಪಟೇಲ್ ಅವರು ಶಾಲು ಮತ್ತು ಸ್ಮರಣ ಚಿಹ್ನೆಯನ್ನು ನೀಡಿ ಸನ್ಮಾನಿಸಿದರು.
ಮುಕ್ತಾರ್ ಪಟೇಲ್ ಅವರು ಕಮಾಲ್ ಪಾರೆಕ್ಕಲ್ ಅವರ ಜೀವನದ ಅವಿಸ್ಮರಣೀಯ ಕ್ಷಣಗಳನ್ನು ಮತ್ತು ಅರಂತೋಡು ಊರಿನಲ್ಲಿ ಕಮಾಲ್ ಪಾರೆಕ್ಕಲ್ ರವರ ಉಪಸ್ಥಿತಿ ಮತ್ತು ಜನರೊಡನೆ ಅವರ ಬಾಂಧವ್ಯದ ಕ್ಷಣಗಳನ್ನು ಸ್ಮರಿಸಿದರು ಮತ್ತು , ಯುವ ಪೀಳಿಗೆಗೆ ಹಳೆಯ ದಿನಗಳ ಜೀವನ ಶೈಲಿಯ ಬಗ್ಗೆ ಅವರಲ್ಲಿರುವ ಕಾಳಜಿಯ ಬಗ್ಗೆ ವಿವರಿಸಿದರು.
ಅರಂತೋಡು ಜಮಾತ್ ಸದಸ್ಯ ಸಮೀರ್ ಕಲ್ಲಾರೆ ಕಾರ್ಯಕ್ರಮ ನಿರೂಪಿಸಿದರು.