ನ. 27 ರಂದು ಬೆಳಿಗ್ಗೆ ಪ್ರಜಾ ಧ್ವನಿ ಕರ್ನಾಟಕ ರಾಷ್ಟ್ರಧ್ವಜ ಗೌರವಯಾತ್ರೆಯು ಸಂಪಾದ ಗೇಟ್ ಬಳಿಯಿಂದ ಉದ್ಘಾಟನೆಗೊಳ್ಳಲಿದ್ದು ನಂತರ ಕ್ರಮವಾಗಿ ಸಂಪಾಜೆ ಅರಂತೋಡು ಮರ್ಕಂಜ ಎಲಿಮಲೆ . ಗುತ್ತಿಗಾರು ಸುಬ್ರಹ್ಮಣ್ಯ ಪಂಜ ನಿಂತಿ ಕಲ್ಲು, ಬೆಳ್ಳಾರೆ ಐವರ್ ನಾಡು ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಯಾತ್ರೆಯು ಸಾಗಿ ಬರಲಿದ್ದು ಈ ಯಾತ್ರೆಯನ್ನು ಗುತ್ತಿಗಾರಿನಲ್ಲಿ ಅದ್ದೂರಿಯಾಗಿ ಸ್ವಾಗತಿಸುವ ಸಲುವಾಗಿ ಇಂದು ಗುತ್ತಿಗಾರಿನ ಪ. ಪಂಗಡ ಸಭಾಭವನದಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಪ್ರಜಾಧ್ವನಿ ಕರ್ನಾಟಕ ಯಾತ್ರೆಯ ರೂಪುರೇಷೆಗಳ ಬಗ್ಗೆ ಅಶೋಕ್ ಎಡಮಲೆ ಸಭೆಗೆ ವಿವರಿಸಿದರು.
ಯಾತ್ರೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಹೋರಾಟಗಾರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲು ಅವಕಾಶ ನೀಡಲಾಗುವುದು.
ಸಭೆಯಲ್ಲಿ ಗುತ್ತಿಗಾರು ಹಾಗೂ ನಾಲ್ಕೂರು ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.