ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಮುಗಿಯದ ಗೋಳು

0

ರೋಗಿಗಳನ್ನು ತಂದು ಇಳಿಸುವಲ್ಲಿ ಕಾರು ಪಾರ್ಕ್ ಮಾಡಿದ್ದ ವೈದ್ಯರು

ಆಂಬುಲೆನ್ಸ್ ನಲ್ಲಿ ತಂದ ರೋಗಿಯನ್ನು ಆಸ್ಪತ್ರೆಯ ವರಾಂಡದಲ್ಲಿ ಇಳಿಸಲು ಜಾಗವಿಲ್ಲದೇ ಪರದಾಡಿದ ಚಾಲಕ

ಇತ್ತೀಚೆಗೆ ಸುಳ್ಯ ಸರಕಾರಿ ಆಸ್ಪತ್ರೆಯ ಬಗ್ಗೆ ಒಂದಲ್ಲ ಒಂದು ಸಮಸ್ಯೆಯ ಸುದ್ದಿ ಬರುತ್ತಲೇ ಇದೆ.

ನ 17 ರಂದು ಸಂಜೆ ಕಲ್ಲುಗುಂಡಿ ಸಮೀಪ ವಾಹನ ಅಪಘಾತವಾಗಿದ್ದು ಅದರಲ್ಲಿ ಓರ್ವ ಗಾಯಾಳುವನ್ನು ಆಂಬುಲೆನ್ಸ್ ಕಾರಿನಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ತರಲಾಗಿತ್ತು.

ಕಾರು ಆಸ್ಪತ್ರೆಗೆ ಬರುತ್ತಿದ್ದಂತೆ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಮುಂಭಾಗ ಇರುವ ಜಾಗದಲ್ಲಿ ವೈದ್ಯರೊಬ್ಬರ ಕಾರು ನಿಲ್ಲಿಸಿದ್ದು ಈ ವೇಳೆ ಮಳೆ ಜೋರಾಗಿ ಬರುತಿದ್ದು ಗಾಯಳುವನ್ನು ಇಳಿಸಲು ಜಾಗವಿಲ್ಲದ ಪರಿಸ್ಥಿತಿ ಉಂಟಾಗಿದೆ.
ಈ ವೇಳೆ ಕಾರನ್ನು ತೆಗೆಯಲು ಆಂಬುಲೆನ್ಸ್ ಚಾಲಕ ಮನವಿ ಮಾಡಿದಾಗ ವೈದ್ಯರು ಅಲ್ಪ ಮುನಿಸಿಕ್ಕೊಂಡರು.

ಬಳಿಕ ಆಂಬುಲೆನ್ಸ್ ಚಾಲಕ ಮತ್ತು ವೈದ್ಯರ ನಡುವೆ ಅಲ್ಪ ಸ್ವಲ್ಪ ಮಾತುಗಳು ನಡೆದು ಕಾರಿನಳಿನಲ್ಲಿದ್ದ ಗಾಯಳುವನ್ನು ಹೊರಗೆ ಇಳಿಸಿ ಮತ್ತೆ ಟ್ರಾಲಿಯಲ್ಲಿ ಅವರನ್ನು ಆಸ್ಪತ್ರೆ ಒಳಗೆ ಕೊಂಡೊಯ್ಯುವ ಪರಿಸ್ಥಿತಿ ಉಂಟಾಯಿತು.

ಈ ಘಟನೆ ಬಗ್ಗೆ ಆಂಬುಲೆನ್ಸ್ ಚಾಲಕ ಮಾಲಕ ಸಂಘಟನೆಯ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ನಾವು ರೋಗಿಗಳನ್ನು, ಅಥವಾ ಗಾಯಳುಗಳನ್ನು ದೂರ ದೂರ ದಿಂದ ತರುತ್ತೇವೆ. ಆದರೆ ಆಸ್ಪತ್ರೆಗೆ ಬಂದಾಗ ಇಲ್ಲಿಯ ಅವ್ಯವಸ್ಥೆಯನ್ನು ಕಂಡಾಗ ತುಂಬಾ ನೋವಾಗುತ್ತೆ. ಈ ವೇಳೆ ಸಮಸ್ಯೆ ಬಗ್ಗೆ ಪ್ರಶ್ನೆ ಮಾಡುವ ಸನ್ನಿವೇಶ ನಿರ್ಮಾಣವಾಗುತ್ತದೆ ಎಂದು ಹೇಳುತ್ತಾರೆ.