2025ರ ಜ. 26ರಿಂದ ಜ. 29ರ ತನಕ ನಡೆಯಲಿರುವ ಅಯ್ಯನಕಟ್ಟೆ ಜಾತ್ರೋತ್ಸವದ ಪೂರ್ವಭಾವಿ ಸಭೆ ನ. 17ರಂದು ಮೂರು ಕಲ್ಲಡ್ಕ ಶ್ರೀ ಇಷ್ಟದೇವತಾ ಉಳ್ಳಾಕುಲು ಸನ್ನಿಧಿಯಲ್ಲಿ ಸಮಿತಿಯ ಅಧ್ಯಕ್ಷ ಚೆನ್ನಪ್ಪ ಗೌಡ ಕಜೆಮೂಲೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ವಿಶ್ವಸ್ಥರಾದ ವೆಂಕಟ್ರಮಣ ಗೌಡ ತಂಟೆಪ್ಪಾಡಿ, ಎನ್. ವಿಶ್ವನಾಥ ರೈ ಕಳಂಜಗುತ್ತು, ಶಿನಪ್ಪ ಗೌಡ ತೋಟದಮೂಲೆ, ಪ್ರಧಾನ ದೈವದ ಪಾತ್ರಿ ಲಕ್ಷ್ಮಣ ಗೌಡ ಬೇರಿಕೆ, ಸೇವಾ ಸಮಿತಿ ಮತ್ತು ಜಾತ್ರೋತ್ಸವ ಸಮಿತಿ ಪದಾಧಿಕಾರಿಗಳಾದ ಶ್ರೀನಾಥ್ ರೈ, ಕುಶಾಲಪ್ಪ ಗೌಡ ಮಣಿಮಜಲು, ಪುರುಷೋತ್ತಮ ಗೌಡ ತಂಟೆಪ್ಪಾಡಿ, ಚಂದ್ರಶೇಖರ ರೈ ಬಜನಿ, ರುಕ್ಮಯ್ಯ ಗೌಡ ಕಳಂಜ, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಂ. ಕೂಸಪ್ಪ ಮುಗುಪ್ಪು, ಅನಂತಕೃಷ್ಣ ತಂಟೆಪ್ಪಾಡಿ, ಜಗನ್ನಾಥ ರೈ ಉರುಂಬಿ, ಕೃಷ್ಣಪ್ಪ ಪೂಜಾರಿ ಮೂಲೆಮಜಲು, ಕೌಶಿಕ್ ಕೊಡಪಾಲ, ಗಣೇಶ್ ಮುದ್ದಾಜೆ, ಮುಂಡುಗಾರು ಸುಬ್ರಹ್ಮಣ್ಯ, ಸುಧಾಕರ ರೈ ಎ.ಎಂ, ರುಕ್ಮಯ್ಯ ಗೌಡ ಕಳಂಜ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಸಭೆಯಲ್ಲಿ ಉಪಸ್ಥಿತರಿದ್ದು, ಸಲಹೆ ಸೂಚನೆಗಳನ್ನು ನೀಡಿದರು. ಸೇವಾ ಸಮಿತಿಯ ಕೋಶಾಧಿಕಾರಿ ಬಜನಿಗುತ್ತು ಪ್ರಭಾಕರ ಆಳ್ವ ಸ್ವಾಗತಿಸಿ, ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಕಿಲಂಗೋಡಿ ವಂದಿಸಿದರು. ಸಾನಿಧ್ಯಕ್ಕೆ ಸಂಬಂಧಿಸಿ ನಡೆದ ಪ್ರಶ್ನಾಚಿಂತನೆಯ ವಿವರಗಳನ್ನು ಸೇವಾ ಸಮಿತಿಯ ಸದಸ್ಯ ರಾಮ್ ಪ್ರಸಾದ್ ಕಾಂಚೋಡು ವಿವರಿಸಿದರು.