ಜಯನಗರ :ಆಡು ಮರಿಯ ಕುತ್ತಿಗೆಗೆ ಹಗ್ಗ ಹಾಕಿ ಅಮಾನುಷವಾಗಿ ಎಳೆದೊಯ್ದಿದ್ದಾರೆಂಬ ಆರೋಪ

0

ಮಹಿಳೆಯರಿಂದ ಗಲಾಟೆ, ಡಿ ವೈ ಎಸ್ ಪಿ ಮತ್ತು ಸಿ ಡಿ ಪಿ ಓ ಕಚೇರಿಗೆ ದೂರು, ಠಾಣೆಗೆ ಕರೆಸಿ ವಿಚಾರಣೆ

ಜಯನಗರದ ಅಂಗನವಾಡಿ ಸಮೀಪ ಮಹಿಳೆಯೊಬ್ಬರು ಆಡು ಮರಿಯ ಕುತ್ತಿಗೆಗೆ ಹಗ್ಗದಿಂದ ಕಟ್ಟಿ ಅಮಾನುಷವಾಗಿ ಎಳೆದೊಯ್ಯುತ್ತಿದ್ದರು ಎಂದು ಆರೋಪಿಸಿ, ಮಹಿಳೆಯರ ನಡುವೆ ಜಗಳ ಉಂಟಾಗಿ ಸ್ಥಳಕ್ಕೆ ಪೊಲೀಸರು ಬಂದ ಘಟನೆ ನ 12 ರಂದು ನಡೆದಿದೆ.

ಬಳಿಕ ಈ ಘಟನೆಗೆ ಸಂಭಂದಿಸಿ ಆಯಿಷಾ ಎಂಬುವವರು ಸುಳ್ಯ ಸಿ ಡಿ ಪಿ ಓ ಕಚೇರಿ ಮತ್ತು ಪುತ್ತೂರು ಡಿ ವೈ ಎಸ್ ಪಿ ಯವರಿಗೆ ದೂರು ನೀಡಿದ್ದು ಈ ಬಗ್ಗೆ ಸುಳ್ಯ ಠಾಣಾ ಎಸ್ ಐ ಎರಡು ಕಡೆಯವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿರುವುದಾಗಿ ತಿಳಿದು ಬಂದಿದೆ.

ಘಟನೆ ಬಗ್ಗೆ ಆಯಿಷಾ ರವರು ನೀಡಿರುವ ದೂರಿನಲ್ಲಿ ’12/11/2024 ರಂದು ಮಧ್ಯಾಹ್ನದ ಬಳಿಕ ದ ಸಮಯದಲ್ಲಿ ಅಂಗನವಾಡಿಯ ಕಾರ್ಯಕರ್ತೆ ತಿರುಮಲೇಶ್ವರಿ ಮತ್ತು ಸಹಾಯಕಿ ಶ್ರೀನಿಧಿ ಯವರು ಪಕ್ಕದ ರಸ್ತೆಯ ಬಳಿಯ ಆಡು ಮರಿಯೊಂದನ್ನು ಸುಮತಿಯವರ ಸಹಾಯದೊಂದಿಗೆ ನನ್ನ ಮನೆಯ ಪಕ್ಕದ ಮಸೀದಿಯ ಬಳಿಯವರೆಗೆ ಅದರ ಕುತ್ತಿಗೆಗೆ ನೈಲಾನ್ ಬಳ್ಳಿಯನ್ನು ಬಲತ್ಕಾರವಾಗಿ ಎಳಕೊಂಡು ಬಂದರು. ಅದನ್ನು ನೋಡಿದ ನಾನು ಅವರ ಬಳಿಗೆ ಹೋಗಿ ನೀವು ಯಾಕಾಗಿ ಮೂಕ ಪ್ರಾಣಿಯನ್ನು ಈ ರೀತಿಯಲ್ಲಿ ಹಿಂಸಿಸುತ್ತೀರಿ ಎಂದು ಕೇಳಿ ಅದನ್ನು ಅದರ ಪಾಡಿಗೆ ಬಿಡುವಂತೆ ಕೇಳಿಕೊಂಡೆ. ಇಷ್ಟು ಮಾತ್ರ ವಿಚಾರ ನಡೆದಿದ್ದರು ಸಂಜೆಯ ಹೊತ್ತಿಗೆ ಅಂದರೆ ಸುಮಾರು 5 ಗಂಟೆಯ ಹೊತ್ತಿಗೆ ಸುಳ್ಯ ಪೊಲೀಸರೊಬ್ಬರನ್ನು ಕರಕೊಂಡು ಬಂದು ನನಗೆ ಪೊಲೀಸರಿಂದ ಅವ್ಯಾಚ್ಯವಾಗಿ ಬೈಸಿದರು. ತಿರುಮಲೇಶ್ವರಿ, ಶ್ರೀನಿಧಿ ಮತ್ತು ಸುಮತಿಯವರು ನನ್ನ ಪೋಟೊವನ್ನು ಅವರ ಮೊಬೈಲ್‌ಗಳಲ್ಲಿ ತೆಗೆದರು. ಪೊಲೀಸರಿಂದ ನನಗೆ ಬೆದರಿಕೆಯನ್ನು ಒಡ್ಡಿಸಿದರು.

ಮೇಲೆ ಹೇಳಿದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಶ್ರೀನಿಧಿ ಹಾಗು ನೆರೆಯ ಸುಮತಿಯವರು ಮಹಿಳೆಯಾದ ನನ್ನ ಮೇಲೆ ವಿನಾ ಕಾರಣ ದರ್ಪ ತೋರಿ ಪೊಲೀಸರನ್ನು ಕರೆಯಿಸಿ ನನಗೆ ಅವ್ಯಾಚ್ಯ ಶಬ್ದಗಳಿಂದ ಬೈಸಿ, ಬೆದರಿಸಿ ನನಗೆ ಮಾನಸಿಕ ಹಿಂಸೆಯನ್ನು ನೀಡಿರುತ್ತಾರೆ. ಅವರ ಈ ದೌರ್ಜನ್ಯದಿಂದಾಗಿ ನನಗೆ ಮಾನಸಿಕ ವೇದನೆಯುಂಟಾಗಿರುವುದಲ್ಲದೆ. ಪರಿಸರದಲ್ಲಿ ನನ್ನ ತೇಜೋವಧೆಯು ಆಗಿರುತ್ತದೆ. ನಾನು ಕೇವಲ ಮೂಕ ಪ್ರಾಣಿಯನ್ನು ಅವರು ಹಿಂಸಿಸುವುದನ್ನು ಮಾತ್ರ ಪ್ರತಿಭಟಿಸಿದ್ದೆ ಮಾತನಾಡಿರುವುದಿಲ್ಲ.. ಅದರ ಹೊರತಾಗಿ ನಾನೇನು ಅವರಲ್ಲಿಆದ್ದರಿಂದ ತಾವು ಮೇಲೆ ಹೇಳಿದ ಅಂಗನವಾಡಿ ಕಾರ್ಯಕರ್ತೆ ತಿರುಮಲೇಶ್ವರಿ. ಸಹಾಯಕಿ ಶ್ರೀನಿಧಿ ಮತ್ತು ನೆರೆಯ ಸುಮತಿ ಇವರುಗಳನ್ನು ಕರೆಯಿಸಿ ನನ್ನ ಸಮಕ್ಷಮ ವಿಚಾರಣೆ ನಡೆಸಿ ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ನಮೂಡಿಸಿದ್ದಾರೆ.

ಅದೇ ರೀತಿ ಪುತ್ತೂರು ಡಿ ವೈ ಎಸ್ ಪಿ ಯವರಿಗೂ ದೂರು ನೀಡಿದ್ದು ನ್ಯಾಯ ಕೊಡಿಸುವಂತೆ ಕೇಳಿಕೊ0ಡಿದ್ದಾರೆ.