ಉಬರಡ್ಕ ಮಿತ್ತೂರು ಗ್ರಾಮದ ಪಟ್ರಕೋಡಿ ಶಿವಣ್ಣ ಗೌಡರವರು ಅ.27 ರಂದು ನಿಧನರಾಗಿದ್ದು, ಮೃತರ ವೈಕುಂಠ ಸಮರಾಧಾನೆಯು ನ.21 ರಂದು ಸುಳ್ಯ ಕೊಡಿಯಾಲಬೈಲ್ ಗೌಡ ಸಮುದಾಯ ಭವನದಲ್ಲಿ ನಡೆಯಿತು.
ಹಿರಿಯರಾದ ಬಳ್ಳಡ್ಕ ರತ್ನಾಕರ ಗೌಡರವರು ದಿ.ಶಿವಣ್ಣ ಗೌಡ ಪಟ್ರಕೋಡಿಯವರ ಆದರ್ಶ ಗುಣಗಳ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು.ಆಗಮಿಸಿದ ನೂರಾರು ಜನರು ಶಿವಣ್ಣ ಗೌಡರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಈ ಸಂದರ್ಭದಲ್ಲಿ ಮೃತರ ಪುತ್ರ ತಾಲೂಕು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ, ಪಿ.ಎಸ್.ಆನಂದ, ಪುತ್ರಿ ಶ್ರೀಮತಿ ಚಿತ್ರಕಲಾ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಮಿತ್ರರು ಉಪಸ್ಥಿತರಿದ್ದರು.