ಶ್ರೀ ಕ್ಷೇತ್ರ ಧ. ಗ್ರಾ. ಯೋಜನೆಯಿಂದ ಅಪಘಾತಕ್ಕೀಡಾದ ಶೌರ್ಯ ವಿಪತ್ತು ಘಟಕದ ಸದಸ್ಯರಿಗೆ ಸಹಾಯಧನ ಮಂಜೂರಾತಿ ಪತ್ರ ವಿತರಣೆ

0

ಶ್ರೀ ಕ್ಷೇತ್ರ ಧ. ಗ್ರಾ. ಯೋಜನೆ ಸುಳ್ಯ ತಾಲೂಕಿನ ಬೆಳ್ಳಾರೆ ವಲಯದಲ್ಲಿ ಪೆರುವಾಜೆ ಶೌರ್ಯ ವಿಪತ್ತು ಘಟಕದ ಸದಸ್ಯರಿಗೆ ಸಹಾಯಧನ ಮಂಜೂರಾತಿ ಪತ್ರ ವಿತರಣೆ ನ. 22ರಂದು ನಡೆಯಿತು.


ಪೆರುವಾಜೆ ಒಕ್ಕೂಟದ ಸದಸ್ಯರಾದ ಶ್ರೀನಿವಾಸ ಶೌರ್ಯ ವಿಪತ್ತು ಘಟಕದ ಸದಸ್ಯರಾಗಿದ್ದು, ಇವರು ಮೇಲ್ಛಾವಣಿಯಿಂದ ಬಿದ್ದು ಸೊಂಟದಿಂದ ಕೆಳಬಾಗ ಸ್ವಾದಿನ ಕಳೆದು ಕೊಂಡಿದ್ದರು. ಇವರಿಗೆ ಯೋಜನೆಯಿಂದ ಸಹಾಯದನವಾಗಿ 50000/ ಮೊತ್ತ ಮಂಜೂರಾಗಿದ್ದು, ಮಂಜೂರಾತಿ ಪತ್ರವನ್ನು ಪೇರುವಜೆ ಜಲದುರ್ಗ ದೇವಿ ದೇವಸ್ಥಾನದ ಮಾಜಿ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮೇಲ್ವಿಚಾರಕರದ ವಿಶಾಲ ಕೆ, ಒಕ್ಕೂಟದ ಅಧ್ಯಕ್ಷ ಸುಂದರ ನಾಯ್ಕ, ವಿಪತು ಘಟಕದ ಪ್ರತಿನಿಧಿ ರಮೇಶ್ ನಾಯ್ಕ, ಸಂಯೋಜಕರದ ಶ್ರೀಮತಿ ಹರೀನಾಕ್ಷಿ, ವಿಪತ್ತು ಘಟಕದ ಸದಸ್ಯರಾದ ರಾಜೇಶ್ ಮತ್ತು ಮನೆಯವರು ಉಪಸ್ಥಿರಿದ್ದರು.