ನ . 27 ರಂದು ಪ್ರಜಾ ಧ್ವನಿ ಕರ್ನಾಟಕ ವತಿಯಿಂದ ಸಂವಿಧಾನ ಸ್ಮರಣೆಗಾಗಿ ಸುಳ್ಯ ತಾಲೂಕಿನಾದ್ಯಂತ ರಾಷ್ಟ್ರಧ್ವಜ ಗೌರವ ಯಾತ್ರೆ

0

ಪತ್ರಿಕಾಗೋಷ್ಠಿಯಲ್ಲಿ ಪ್ರಜಾಧ್ವನಿ ಸಂಚಾಲಕ ಗೋಪಾಲ್ ಪೆರಾಜೆ ಹೇಳಿಕೆ

ಪ್ರಜಾ ಧ್ವನಿ ಕರ್ನಾಟಕ ವತಿಯಿಂದ 1949 ನವೆಂಬರ್ 26 ಸಂವಿಧಾನದ ಸಮರ್ಪಣಾ ದಿನ ನೆನಪಿನ ಪ್ರಯುಕ್ತ ನವಂಬರ್ 27 ಬುಧವಾರದಂದು ರಾಷ್ಟ್ರಧ್ವಜ ಗೌರವ ಯಾತ್ರೆ ಸುಳ್ಯ ತಾಲೂಕಿನಾದ್ಯಂತ ನಡೆಯಲಿದೆ ಎಂದು ಸುಳ್ಯ ಪ್ರಜಾಧ್ವನಿ ಸಂಚಾಲಕರಾದ ಗೋಪಾಲ್ ಪೆರಾಜೆ ಪತ್ರಿಕಾಗೋಷ್ಠಿಯಲ್ಲಿ ನ.22 ರಂದು ಹೇಳಿದರು.

ಬಳಿಕ ಮಾತನಾಡಿದ ಇವರು “ನ 27ರಂದು ಬೆಳಿಗ್ಗೆ ಯಾತ್ರೆಯ ಉದ್ಘಾಟನಾ ಕಾರ್ಯಕ್ರಮ ಸಂಪಾಜೆ ಗೇಟಿನ ಬಳಿ ಬೆಳಿಗ್ಗೆ 8.30ಕ್ಕೆ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟಯನ್ನು ಸುಳ್ಯ ತಹಶೀಲ್ದಾರರು ಮಂಜುಳಾ ಎಮ್. ರಾಷ್ಟ್ರ ಧ್ವಜ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಲಿದ್ದಾರೆ.

ಬಳಿಕ ರಾಷ್ಟ ಧ್ವಜವನ್ನು ಇರಿಸಿದ ಭವ್ಯ ವಾಹನ ಹಾಗೂ ಸಾರ್ವಜನಿಕರ ವಾಹನಗಳ ಮುಖಾಂತರ ಕಲ್ಲುಗುಂಡಿ, ಅರಂತೋಡು, ಮರ್ಕಂಜ, ಎಲಿಮಲೆ, ಗುತ್ತಿಗಾರು, ಸುಬ್ರಹ್ಮಣ್ಯ, ಪಂಜ, ನಿಂತಿಕಲ್ಲು ಬೆಳ್ಳಾರೆ, ಐವರ್ನಾಡು, ಸೋಣಂಗೇರಿ, ಪೈಚಾರು
ಕಡೆಗಳಲ್ಲಿಸಂವಿಧಾನದ ಮಹತ್ವವನ್ನು ಸಾರುತ್ತಾ ಸಾಗಿ ಬಂದು ಸುಳ್ಯ ದ ಜ್ಯೋತಿ ಸರ್ಕಲ್ ನಿಂದ ಪಾದಯಾತ್ರೆಯ ಮೂಲಕ ಸಾಗಿ ಬಂದು ಗಾಂಧಿನಗರದಲ್ಲಿರುವ ಮಹಾತ್ಮಗಾಂಧಿ ಪ್ರತಿಮೆಗೆ ಹಾರಾರ್ಪಣೆ ನಡೆಯಲಿದೆ .

ಬಳಿಕ ಸುಳ್ಯದ ಖಾಸಾಗಿ ಬಸ್ ನಿಲ್ದಾಣದ ಬಳಿ ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಪುತ್ತೂರು ಎ. ಸಿ ಸಹಾಯಕ ಆಯುಕ್ತರು ಜುಬಿನ್ ಮಹಾಪಾತ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಭಾಷಣವನ್ನು ಖ್ಯಾತ ವಾಗ್ಮಿಗಳು ನಿಕೇತ್ ರಾಜ್ ಮೌರ್ಯ , ಮುಖ್ಯ ಅತಿಥಿಗಳಾಗಿ ಮಂಗಳೂರಿನ ಸಾಮಾಜಿಕ ನಾಯಕರಾದ ಇನಾಯತ್ ಅಲಿ, ಸುಳ್ಯ ಚೆನ್ನಕೇಶವ ದೇವಸ್ಥಾನ ಅನುವಂಶಿಕ ಆಡಳಿತ ಮೊಕ್ತೇಸರರು ಹರಪ್ರಸಾದ್ ತುದಿಯಡ್ಕ , ಸಯ್ಯದ್ ತಾಹ್ವೀರ್ ಸಅದಿ , ಬಾ ಅಲವಿ ತಂಘಳ್ , ಸುಳ್ಯ ಸೈoಟ್ ಬ್ರಿಜಡ್ಸ್ ಚರ್ಚ್ ನ ಧರ್ಮಗುರುಗಳು ಫಾ. ವಿಕ್ಟರ್ ಡಿಸೋಜಾ , ಮೊದಲಾದವರು ಉಪಸ್ಥಿತರಿರಲಿದ್ದಾರೆ. ಈ ಕಾರ್ಯಕ್ರಮದಲ್ಲಿಸಾವರ್ಜನಿಕರು, ಮಾಧ್ಯಮ ವಕ್ತಾರರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಲಿಸಬೇಕು ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಅಶೋಕ್ಎಡಮಲೆ , ಭವಾನಿ ಶಂಕರ್ ಕಲ್ಮಡ್ಕ , ಭರತ್ ಕುಕ್ಕುಜಡ್ಕ , ರೈತ ಸಂಘ ಜಿಲ್ಲಾಧ್ಯಕ್ಷ ದಿವಾಕರ ಪೈ, ಅಶ್ರಫ್ ಉಸ್ಥಿತರಿದ್ದರು