ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಡಾ.ಕೆ.ವಿ.ಚಿದಾನಂದರಿಂದ ಸಮರ್ಪಣೆಯಾಗಲಿರುವ ಬ್ರಹ್ಮರಥ

0

ನೂತನ ರಥದ ಶೆಡ್ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ನೂತನ ರಥದ ಶೆಡ್ ನಿರ್ಮಾಣಕ್ಕೆ ಗುದ್ದಲಿ ಪೂಜೆಯು ನ.23 ರಂದು ನಡೆಯಿತು.


ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರವರು ದೇವಸ್ಥಾನಕ್ಕೆ ಬ್ರಹ್ಮರಥ ಸಮರ್ಪಣೆ ಮಾಡಲಿದ್ದು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ರಥದ ಕೊಟ್ಟಿಗೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.


ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಶ್ರೀಮತಿ ಎಂ.ಮೀನಾಕ್ಷಿ ಗೌಡ,ಲಿಂಗಪ್ಪ ಗೌಡ ಕೇರ್ಪಳ, ಎನ್.ಜಯಪ್ರಕಾಶ್ ರೈ, ರಮೇಶ್ ಬೈಪಡಿತ್ತಾಯ,
ಶ್ರೀಮತಿ ಶೋಭಾ ಚಿದಾನಂದ, ಡಾ.ಲೀಲಾಧರ್ ಡಿ.ವಿ, ಅಕ್ಷಯ್ ಕೆ.ಸಿ, ನಗರ ಪಂಚಾಯತ್ ಸದಸ್ಯೆ ಶ್ರೀಮತಿ ಕಿಶೋರಿ ಶೇಟ್ , ರಾಮಚಂದ್ರ ಭಟ್ ಭಾರತ್ ಆಗ್ರೋ,ಉದ್ಯಮಿ ಕೃಷ್ಣ ಕಾಮತ್, ಹರಿರಾಯ ಕಾಮತ್, ಹೇಮನಾಥ ಕುರುಂಜಿ, ಕೃಪಾಶಂಕರ ತುದಿಯಡ್ಕ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.