ಎಲೆಚುಕ್ಕಿ ನಿರ್ವಹಣೆ, ಪೋಷಕಾಂಶಗಳ ನಿರ್ವಹಣೆ, ಮಿಶ್ರ ಬೆಳೆ,ಅಡಿಕೆ ಹಳದಿ ರೋಗ ಬಗ್ಗೆ ಕೃಷಿ ವಿಚಾರಗೋಷ್ಠಿ
ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ – 2024 ಕಾರ್ಯಕ್ರಮವು ಸಂಘದ ಪ್ರಧಾನ ಕಛೇರಿಯ ಶತ ಸೌದದ ದೀನ್ ದಯಾಳ್ ರೈತ ಸಭಾಂಗಣದಲ್ಲಿ ನಡೆದಿದ್ದು ಕೃಷಿ ವಿಚಾರಗೋಷ್ಠಿ ನಡೆಯಿತು.
ಸಹಕಾರಿ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಅವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ, ಸಿ.ಪಿ.ಸಿ.ಆರ್.ಐ ಸಸ್ಯ ಶಾಸ್ತ್ರ ವಿಭಾದ ಎಚ್.ಒ.ಡಿ ವಿಜ್ಞಾನಿ ಡಾ.ವಿನಯ ಹೆಗ್ಡೆ, ಮತ್ತೋರ್ವ ವಿಜ್ಞಾನಿ ಡಾ. ಭವಿಷ್, ಪ್ರಗತಿ ಪರ ಕೃಷಿಕ ಸುರೇಶ್ಚಂದ್ರ ಕಲ್ಮಡ್ಕ, ಶಂಕರ ಪ್ರಸಾದ್ ರೈ ಸಂಪಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಡಿಕೆ ಎಲೆಚುಕ್ಕಿ ನಿರ್ವಹಣೆ, ಪೋಷಕಾಂಶಗಳ ನಿರ್ವಹಣೆ, ಮಿಶ್ರ ಬೆಳೆ ಏನು, ಹೇಗೆ,
ಅಡಿಕೆ ಹಳದಿ ರೋಗ ಭಾದಿಸಿದರೆ ಕೃಷಿ ಬದುಕು ಹೇಗೆ ಎಂಬ ವಿಚಾರಗಳ ಬಗ್ಗೆ ಗೋಷ್ಠಿ ನಡೆಯಿತು.