ನೋಟಿಸು ನೀಡಿದರೂ ನರೇಗಾಫಲಾನುಭವಿಗಳು ಸಭೆಗೆ ಬರುವುದಿಲ್ಲ ಯಾಕೆ ?
ಆಲೆಟ್ಟಿ ಗ್ರಾಮ ಪಂಚಾಯತ್ ನ 2023-24 ನೇ ಸಾಲಿನ ಮಹಾತ್ಮಗಾಂಧಿ ನರೇಗಾ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ವಿಶೇಷ ಗ್ರಾಮಸಭೆಯು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವೀಣಾ ಆಲೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನ.29 ರಂದು ಪಂಚಾಯತ್ ಸಭಾಭವನದಲ್ಲಿ
ನಡೆಯಿತು.
ನೊಡೆಲ್ ಅಧಿಕಾರಿಯಾಗಿ ದೈಹಿಕ ಶಿಕ್ಷಣ ಪರಿವೀಕ್ಷಕಿ ಶ್ರೀಮತಿ ಆಶಾ ನಾಯಕ್ ಸಭೆಯ ಕಲಾಪ ನಡೆಸಿದರು.
ಪ್ರಸ್ತುತ ಸಾಲಿನಲ್ಲಿ ಗ್ರಾಮದಲ್ಲಿ ಸುಮಾರು 125 ಕಾಮಗಾರಿ ಮಾಡಲಾಗಿದ್ದು
ರೂ.30.92 ಲಕ್ಷ ಮಂಜೂರಾಗಿದೆ. ಒಟ್ಟು 184 ಕುಟುಂಬದ ಫಲಾನುಭವಿಗಳಿದ್ದು 299 ಜನಸಂಖ್ಯೆಯಾಗಿರುತ್ತದೆ.
ಕಾಮಗಾರಿ ನಡೆದ ಸ್ಥಳದಲ್ಲಿ ಖಡ್ಡಾಯವಾಗಿ ಕಾಮಗಾರಿ ವಿವರದ ನಾಮಫಲಕ ಅಳವಡಿಸಬೇಕು. ಫಲಕದಲ್ಲಿ ಅನುದಾನ ಮತ್ತು ಕಾಮಗಾರಿ ಬಾಳಿಕೆಯ ವಿವರ ನಮೂದಿಸಿರಬೇಕು.
15 ನೇ ಹಣಕಾಸು ಯೋಜನೆಯ ಅನುದಾನ ನಿಗದಿ ಪಡಿಸಿದ ಸ್ಥಳದಲ್ಲಿ ಕಾಮಗಾರಿ ಕೆಲಸ ಮಾಡಬೇಕು. ಖಾಸಗಿ ಜಾಗದಲ್ಲಿ ಯೋಜನೆಯ ಕಾಮಗಾರಿ ಮಾಡುವುದು ಸರಿಯಲ್ಲ. ಸಾರ್ವಜನಿಕರು ಉಪಯೋಗಿಸುವ ಜಾಗದಲ್ಲಿ ನಿರ್ವಹಿಸಬೇಕು ಎಂದು ತಾಲೂಕು ಸಂಯೋಜಕ ಚಂದ್ರಶೇಖರ ರವರು ತಿಳಿಸಿದರು. ಈ ಸಂದರ್ಭದಲ್ಲಿ ಉದ್ಯೋಗ ಖಾತರಿ ಯೋಜನೆಯ ಬಳಕೆಯ ಕುರಿತು ಫಲಾನುಭವಿಗಳಿಗೆ ಮಾಹಿತಿ ನೀಡಿದರು.
ಗ್ರಾಮದಲ್ಲಿ ಉದ್ಯೋಗ ಖಾತರಿ ಯೋಜನೆಯ ಫಲಾನುಭವಿಗಳು ಸಾಕಷ್ಟು ಮಂದಿ ಇದ್ದರೂ ಮನೆ ಮನೆಗೆ ಹೋಗಿ ನೋಟಿಸು ತಲುಪಿಸಲಾಗಿದೆ.
ಆದರೂಫಲಾನುಭವಿಗಳು ಸಭೆಗೆ ಭಾಗವಹಿಸುತ್ತಿಲ್ಲ ಯಾಕೆ ? ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳು
ಯೋಜನೆಯ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಮಗಾರಿ ಕೆಲಸಕ್ಕೆ ಬಿಡುಗಡೆಯಾಗಿರುವ ಅನುದಾನಗಳ ಬಗ್ಗೆ ತಿಳಿದು ಕೆಲಸ ನಡೆಯುವಾಗ ಸಾರ್ವಜನಿಕ ನಾಗರಿಕರು ಜವಬ್ದಾರಿ ವಹಿಸಿಕೊಂಡು ಅಸರ್ಪಕ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುವಂತಾಗಬೇಕು. ಫಲಾನುಭವಿಗಳು ಸಭೆಯಲ್ಲಿ ಭಾಗವಹಿಸಬೇಕು ಇದರಿಂದ ಸರಕಾರದಿಂದ ಸಿಗುವ ಸೌಲಭ್ಯಗಳ ಹೆಚ್ಚಿನ ಮಾಹಿತಿ ಸಿಗುವುದು ಎಂದು ನೊಡೆಲ್ ಅಧಿಕಾರಿ ಶ್ರೀಮತಿ ಆಶಾ ನಾಯಕ್ ರವರು ತಿಳಿಸಿದರು.
ಮುಂದಿನ ಅವಧಿಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕ್ರಿಯಾ ಯೋಜನೆ ಕಾಮಗಾರಿ ಕೆಲಸ ಮಾಡುವ ಫಲಾನುಭವಿಗಳು ಮುಂಚಿತವಾಗಿ ಪಂಚಾಯತಿಗೆ ತಿಳಿಸುವಂತೆ ಪಿ.ಡಿ.ಒ ಸೃಜನ್ ಎ.ಜಿ ಯವರು ಸೂಚಿಸಿದರು.
ಗ್ರಾಮದ ವ್ಯಾಪ್ತಿಯಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂಬ ಆದೇಶ ಬಂದಿದೆಯೇ ಎಂದುಆಲೆಟ್ಟಿ ಸೊಸೈಟಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ ಯವರು ಪ್ರಶ್ನಿಸಿದರು.
ಸಭೆಯಲ್ಲಿಪಂಚಾಯತ್
ಸದಸ್ಯರಾದ ದಿನೇಶ್ ಕಣಕ್ಕೂರು, ಧರ್ಮಪಾಲ ಕೊಯಿಂಗಾಜೆ, ಗೀತಾ ಕೋಲ್ಚಾರು, ಪುಷ್ಪಾವತಿ ಕುಡೆಕಲ್ಲು, ಭಾಗೀರಥಿ ಪತ್ತುಕುಂಜ, ಶಶಿಕಲಾ ದೋಣಿಮೂಲೆ, ಶಂಕರಿ ಕೊಲ್ಲರಮೂಲೆ,
ಸುನಿತ ಅರಂಬೂರು,
ಮೀನಾಕ್ಷಿ ಕುಡೆಕಲ್ಲು ಉಪಸ್ಥಿತರಿದ್ದರು. ಉದ್ಯೋಗ ಖಾತರಿ ಯೋಜನೆಯ ಫಲಾನುಭವಿಗಳು ಬೆರಳೆಣಿಕೆಯ ಸಂಖ್ಯೆಯಲ್ಲಿದ್ದರು.
ಪಂಚಾಯತ್ ಸಿಬ್ಬಂದಿ ಸೀತಾರಾಮ ಮೊರಂಗಲ್ಲು ಸ್ವಾಗತಿಸಿದರು. ಪಿ.ಡಿ.ಒ ಸೃಜನ್ ವಂದಿಸಿದರು. ನರೇಗಾ ಯೋಜನೆಯ ಸಂಪನ್ಮೂಲ ಸಂಯೋಜಕಿ ಪ್ರತಿಮಾ ಕಾರ್ಯಕ್ರಮ ನಿರೂಪಿಸಿದರು. ವೇಣುಗೋಪಾಲ, ಪ್ರಮೀಳಾ ಹಾಗೂ ಪಂಚಾಯತ್ ಸಿಬ್ಬಂದಿ
ವರ್ಗದವರು ಸಹಕರಿಸಿದರು.