ಅರಂತೋಡು ಗ್ರಾಮದ ಉಳುವಾರು ದಿ.ಭಾಸ್ಕರ ಗೌಡ ಉಳುವಾರುರವರ ಶ್ರದ್ದಾಂಜಲಿ ಸಭೆ ಹಾಗೂ ನುಡಿನಮನ ಸಲ್ಲಿಕೆಯು ಅರಂತೋಡಿನ ತೆಕ್ಕಿಲ್ ಸಮುದಾಯಭವನದಲ್ಲಿ ನ. 3೦ರಂದು ನಡೆಯಿತು.
ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾಧರರವರು ದಿ. ಭಾಸ್ಕರ ಗೌಡ ಉಳುವಾರುರವರನ್ನು ಸ್ಮರಿಸಿ ನುಡಿನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ದಿ. ಭಾಸ್ಕರ ಗೌಡ ಉಳುವಾರು ಅವರ ಸ್ಮರಣಾರ್ಥ ಅವರ ಮನೆಯವರು ಅರಂತೋಡು ಪಾಪ್ಯುಲರ್ ಎಜ್ಯುಕೇಶನ್‌ಗೆ ರೂ. 25,೦೦೦ ದೇಣಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮೃತರ ಪತ್ನಿ ಯು.ಬಿ.ಜಲಜಾಕ್ಷಿ, ಮಕ್ಕಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.