ಶಾಲಾ ಸ್ಥಾಪಕ ದಾನಿಗಳ ಸ್ಮರಣೆ ಮತ್ತು ಸನ್ಮಾನ, ಗೌರವಾರ್ಪಣೆ
ದ.ಕ.ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಸುಳ್ಯ ,ಸರಕಾರಿ ಪದವಿಪೂರ್ವ ಕಾಲೇಜು ಐವರ್ನಾಡು ಇಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ,ವಾರ್ಷಿಕೋತ್ಸವ ,ಶಾಲಾ ಸ್ಥಾಪಕ ದಾನಿಗಳ ಸ್ಮರಣೆ ಹಾಗೂ ಗೌರವಾರ್ಪಣೆ ಕಾರ್ಯಕ್ರಮವು ಡಿ.07 ರಂದು ನಡೆಯಲಿದೆ.
ಸಂಜೆ 4.00 ಗಂಟೆಗೆ ಸರಕಾರಿ ಅನುದಾನ ಹಾಗೂ ಊರವರ ಕೊಡುಗೆಯಿಂದ ನಿರ್ಮಾಣವಾದ ರಂಗಮಂದಿರ,ಶಿವರಾಮರಾವ್ ಮತ್ತು ಶ್ರೀಮತಿ ಜಯಲಕ್ಷ್ಮೀ ಉದ್ದಂಪಾಡಿ ಇವರ ಸ್ಮರಣಾರ್ಥ ಹರೀಶ್ ರಾವ್ ಉದ್ದಂಪಾಡಿ ಮತ್ತು ಮನೆಯವರ ಸೇವೆಯಾಗಿ ನಿರ್ಮಾಣವಾದ ಅಕ್ಷಯ ಭೋಜನ ಶಾಲೆ,ಎಂ.ಎಸ್.ಕುಶಾಲಪ್ಪ ಗೌಡ ಮಡ್ತಿಲ ಹಾಗೂ ಸಹೋದರರ ಸೇವೆಯಾಗಿ ನಿರ್ಮಾಣವಾದ ಧ್ವಜಸ್ತಂಭ,ಎನ್.ಎಂ.ಬಾಲಕೃಷ್ಣ ಪಾಲೆಪ್ಪಾಡಿ ಇವರ ಸ್ಮರಣಾರ್ಥ ಶ್ರೀಮತಿ ಜ್ಯೊತ್ಸ್ನಾ ಪಾಲೆಪ್ಪಾಡಿ ಇವರ ಸೇವೆಯಾಗಿ ನೀಡಿದ ಕೈತೊಳೆಯುವ ಬೇಸಿನ್ ವ್ಯವಸ್ಥೆ ಹಾಗೂ ಸರಕಾರದ ಅನುದಾನದಿಂದ ನಿರ್ಮಾಣವಾದ ಕಾಲೇಜು ವಿಭಾಗದ ಶೌಚಾಲಯದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಸನ್ಮಾನ
ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಹರೀಶ್ ರಾವ್ ಉದ್ದಂಪಾಡಿ ಹಾಗೂ ಮನೆಯವರಿಗೆ ಸನ್ಮಾನ ನಡೆಯಲಿದೆ.
1994 ರಲ್ಲಿ ಸ.ಪ್ರೌ.ಶಾಲೆ ಐವರ್ನಾಡು ಇದರ ಪ್ರಾರಂಭಕ್ಕೆ ಕಾರಣಕರ್ತರಾದ ರೂ.5,000 ಕ್ಕಿಂತ ಮೇಲ್ಪಟ್ಟು ದೇಣಿಗೆ ನೀಡಿದ ಸ್ಥಾಪಕ ದಾನಿಗಳಿಗೆ ಗೌರವಾರ್ಪಣೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ
ಸಂಜೆ 3.00 ಗಂಟೆಯಿಂದ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಜೃತಿಕ ಕಾರ್ಯಕ್ರಮ ನಡೆಯಲಿದೆ.
ಪಿಯರ್ಲ್ ಡ್ಯಾನ್ಸ್ ಕ್ರೂ ತಂಡ ಮಂಗಳೂರು ಇವರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿ ಗಂಟೆ 7.00 ರಿಂದ ಹಿರಿಯ ವಿದ್ಯಾರ್ಥಿ ಸಂಘದ ಪ್ರಾಯೋಜಕತ್ವದಲ್ಲಿ ನಡೆಯಲಿದೆ.