ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ನೂತನ ಬ್ರಹ್ಮರಥ ಸಮರ್ಪಣೆ ಆಗಲಿದ್ದು ನೂತನ ರಥದ ಪುರಪ್ರವೇಶ ,ರಥಸಮರ್ಪಣೆ ಮತ್ತು ಶ್ರೀ ದೇವರ ಬ್ರಹ್ಮರಥೋತ್ಸವ,ಜಾತ್ರೋತ್ಸವ,ಇತ್ಯಾದಿಗಳ ಬಗ್ಗೆ ಸಮಾಲೋಚಿಸಲು ಡಿ.06 ರಂದು ಶುಕ್ರವಾರ 3.30 ಗಂಟೆಗೆ ಭಕ್ತಾಭಿಮಾನಿಗಳ ಸಭೆಯನ್ನು ದೇವಳದ ಸಭಾಂಗಣದಲ್ಲಿ ಕರೆಯಲಾಗಿದೆ.
ಈ ಸಭೆಗೆ ತಾವುಗಳು ಆಗಮಿಸಿ ಸೂಕ್ತ ಸಲಹೆಗಳನ್ನು ನೀಡಿ ಮುಂದಿನ ಕಾರ್ಯಯೋಜನೆ ಸಿದ್ಧ ಪಡಿಸಲು ಸಹಕರಿಸಬೇಕಾಗಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ತಿಳಿಸಿದ್ದಾರೆ.