ಸುಳ್ಯ ತಾ.ಆಸ್ಪತ್ರೆ ಶುಶ್ರೂಷಾಧಿಕಾರಿ ಶ್ರೀಮತಿ ಪದ್ಮಾವತಿ ಬಿ.ಯಸ್. ಸೇವಾ ನಿವೃತ್ತಿ

0

ಮಡಿಕೇರಿ ತಾ.ಚೆಂಬು ಗ್ರಾಮದ ಊರುಬೈಲು ಮನೆ ನಿವೃತ್ತ ಸೇನಾಧಿಕಾರಿ ಗಣಪ ಊರುಬೈಲುರವರ ಪತ್ನಿ ಶ್ರೀಮತಿ ಪದ್ಮಾವತಿ ಬಿ.ಯಸ್. ರವರು ಆರೋಗ್ಯ ಇಲಾಖೆಯಲ್ಲಿ ಶುಶ್ರೂಷಾಧಿಕಾರಿಯಾಗಿ ಸುದೀರ್ಘ 31 ವರ್ಷ 10 ತಿಂಗಳ ಕಾಲ ಸೇವೆ ಸಲ್ಲಿಸಿ ನ.30 ರಂದು ನಿವೃತ್ತಿ ಹೊಂದಿದ್ದಾರೆ.

ಇವರು 11-೦1-1993ರಂದು ಶುಶ್ರೂಷಾಧಿಕಾರಿಯಾಗಿ ಜಿಲ್ಲಾ ಆಸ್ಪತ್ರೆ ಮಡಿಕೇರಿಯಲ್ಲಿ ನೇಮಕ ಆಗಿ 13ವರುಷ ಸೇವೆಯ ನಂತರ ಜುಲೈ 2006 ರಲ್ಲಿ ತಾಲೂಕು ಆಸ್ಪತ್ರೆ ಸುಳ್ಯಕ್ಕೆ ವರ್ಗಾವಣೆಗೊಂಡು 30-11-2024ರ ತನಕ ಶುಶ್ರೂಷಾಧಿಕಾರಿಯಾಗಿ 31 ವರುಷ 10 ತಿಂಗಳು ಸೇವೆ ಸಲ್ಲಿಸಿದ್ದಾರೆ.

ಇವರ ಪ್ರಥಮ ಪುತ್ರ ಸುಹಾಸ್ ವೃತ್ತಿಯಲ್ಲಿ ಇಂಜಿನಿಯರಿ0ಗ್ ಆಗಿದ್ದು ಪತ್ನಿ ಶ್ರೀಮತಿ ಶಿಲ್ಪಾರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ದ್ವಿತೀಯ ಪುತ್ರ ಡಾ| ಕೌಶಿಕ್ ಎಂವಿಜೆ ಮೆಡಿಕಲ್ ಕಾಲೇಜ್ ಬೆಂಗಳೂರಿನಲ್ಲಿ ರೇಡಿಯೋಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ.

ಪದ್ಮಾವತಿ ಬಿ.ಯಸ್ ರವರು ಸರಸ್ವತಿ ಹಾಗೂ ಶ್ರೀಧರ ಬಿಳಿಮಲೆ ಅವರ ಪುತ್ರಿ