ರಥ ಬೀದಿಯುದ್ದಕ್ಕೂ ಕುಣಿದ ಸಾವಿರಾರು ಭಜಕರು
ಕೆಟ್ಟ ಮನಸ್ಸುಗಳ ಮೇಲೆ ಒಳ್ಳೆಯ ಮನಸ್ಸುಗಳ ವಿಜಯದ ಸಂಕೇತ ಷಷ್ಠಿ ಮಹೋತ್ಸವ: ಜುಬಿನ್ ಮಹಾಪಾತ್ರ
ಕೆಟ್ಟ ಭಾವನೆಯ ಮನಸ್ಸುಗಳನ್ನು ಹೊಂದಿರುವವರ ಮೇಲೆ ಒಳ್ಳೆಯ ಭಾವನೆ ಹೊಂದಿರುವ ಮನಸ್ಸುಗಳನ್ನು ಹೊಂದಿರುವವರ ವಿಜಯದ ಸಂಕೇತವೇ ಷಷ್ಠಿ ಮಹೋತ್ಸವ., ಸುಬ್ರಹ್ಮಣ್ಯ ದೇವರು ತಾರಾಕಾಸುರನನ್ನು ನಾಶ ಮಾಡುವುದು, ಶಿವ ದೇವರು ಮಲ್ಲಾಸುರನನ್ನು ಪರಾಜಯ ಮಾಡುವ ಸಂದೇಶ ಸಾರಿ ಷಷ್ಠಿ ಮಹೋತ್ಸವದ ಸಂದೇಶವಾಗಿದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿ ಜುಬಿನ್ ಮಹಾಪಾತ್ರ ನುಡಿದರು.
ಅವರು
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಷಷ್ಠಿ ಮಹೋತ್ಸವದ ಲಕ್ಷ ದೀಪೋತ್ಸವ ದಂದು ಕುಣಿತ ಭಜನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವೇದಿಕೆಯಲ್ಲಿ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರುಗಳಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಪವನ್ ಎಂ.ಡಿ, ಸುಧೀರ್ ಶೆಟ್ಟಿ, ವಿಮಲ ರಂಗಯ್ಯ, ಶಿವರಾಮ ರೈ, ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.
ಸುಮಾರು 120 ಕ್ಕಿಂತಲೂ ಅಧಿಕ ಭಜನಾ ತಂಡಗಳು ಕುಣಿತ ಭಜನೆ ಯಲ್ಲಿ ಭಾಗವಹಿಸಿದ್ದವು. 2.30 ಗಂಟೆಗಳ ಕುಣಿತ ಭಜನಾ ಕಾರ್ಯಕ್ರಮ ಜರುಗಿತ್ತು. ರಾಜಗೋಪುರದಿಂದ ಆರಂಭಗೊಂಡು ಕೆ.ಎಸ್.ಆರ್. ಟಿ ಸಿ ಬಸ್ ತಂಗುದಾಣ ಹೋಗುವಲ್ಲಿ ವರೆಗೆ ಕುಣಿತ ಭಜನೆ ನಡೆಯಿತು. ಕೆ.ಯೋಗೀಶ್ ಕಿಣಿ ಕಾರ್ಕಳ ಅವರು ಕುಣಿತ ಭಜನೆ ಗೆ ಹಾಡುಗಳನ್ನು ಹಾಡಿದರು. ಆ ಬಳಿಕ ಲಕ್ಷ ದೀಪೋತ್ಸವದೊಂದಿಗೆ ಚಂದ್ರಮಂಡಲ ರಥೋತ್ಸವ ಮಹಾರಥೋತ್ಸವ ನಡೆಯಿತು.