ವಿವೇಕಾನಂದ ವಿದ್ಯಾ ಸಂಸ್ಥೆ ವಿನೋಬನಗರದಲ್ಲಿ ಡಿ.4 ರಂದು ವಿಜ್ಞಾನ ಸಂಘದ ವತಿಯಿಂದ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ಪ್ರಾಥಮಿಕ ವಿಭಾಗದ ಶಿಕ್ಷಕಿಯಾದ ಪೂರ್ಣಿಮಾ ಕಾರಿಂಜರವರು ವಿಶೇಷ ಚೇತನರಿಗೆ ಸಾಮಾನ್ಯ ಜನರಂತೆ ಇರುವ ಭಾವನೆಗಳು, ಅವರ ಬಗ್ಗೆ ಸರಕಾರವು ಸ್ವಾವಲಂಬನೆ ಮತ್ತು ಯೋಗಕ್ಷೇಮ ಹೆಚ್ಚಿಸುವ ಕಾರ್ಯಕ್ರಮ ನಡೆಸುತ್ತಿದೆ. ಅವರನ್ನು ಮುಖ್ಯ ವಾಹಿನಿಗಳಿಗೆ ಸೇರಿಸುವ ಕುರಿತಂತೆ ಜನಜಾಗೃತಿ ಮೂಡಿಸಲು ನಾವು ಸಹಾಯ ಮಾಡೋಣ ಮತ್ತು ಸಹ ಸಾಮಾನ್ಯರಂತೆ ಸುಖ, ಸಂತೋಷ, ನೆಮ್ಮದಿಂದ ಜೀವನ ಸಾಗಿಸಲಿ ಎಂಬುದು ನಮ್ಮೆಲ್ಲರ ಆಶಯ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.