ಚೆಂಬು: ವಾಸುದೇವ ನಿಡಿಂಜಿ ಅವರಿಗೆ ಪ್ರಗತಿಪರ ಕೃಷಿಕ ಪ್ರಶಸ್ತಿ ಪ್ರದಾನ

0

ಚೆಂಬು ಗ್ರಾಮದ ಚಾಂಬಾಡು ಕಿರುಚಾವಡಿಯಲ್ಲಿ ಕಾಲಾವಧಿ ಜಾಳ್ತೆ ನೇಮೋತ್ಸವದ ಪ್ರಯುಕ್ತ ಯಕ್ಷಕಲಾ ಸಂಘದ ವತಿಯಿಂದ ಕೊಡಮಾಡುವ ಪ್ರಗತಿಪರ ಕೃಷಿಕ ಪ್ರಶಸ್ತಿಯನ್ನು ಕೃಷಿಕರಾದ ವಾಸುದೇವ ನಿಡಿಂಜಿ ಅವರಿಗೆ ಪ್ರದಾನ ಮಾಡಲಾಯಿತು.

ಚೆಂಬು ಶ್ರೀ ಕಿನುಮಣಿ ದೈವಸ್ಥಾನದ ಯಕ್ಷ ಕಲಾಸಂಘದ ವಾರ್ಷಿಕ ಯಕ್ಷೋತ್ಸವ ಕಾರ್ಯಕ್ರಮದಲ್ಲಿ ಕೃಷಿಕರನ್ನು ಗೌರವಿಸುವ ಮತ್ತು ಪ್ರೋತ್ಸಾಹಿಸುವ ಸಲುವಾಗಿ ಕೊಡ ಮಾಡುವ ಗ್ರಾಮದ ಪ್ರಗತಿಪರ ಕೃಷಿಕ ಪ್ರಶಸ್ತಿಯನ್ನು ವಾಸುದೇವ ನಿಡಿಂಜಿ ಊರುಬೈಲು ಇವರಿಗೆ ನೀಡಿ ಗೌರವಿಸಲಾಯಿತು.