ಸುಳ್ಯ ಸೈಂಟ್ ಜೋಸೆಫ್ ಶಾಲಾ ಬೆಳ್ಳಿ ಹಬ್ಬದ ಪ್ರಯುಕ್ತ ಇಂಟರ್ ಕ್ಲಾಸ್ ಪ್ಯಾಟ್ರಿಯೋಟಿಕ್ ಡ್ಯಾನ್ಸ್ 5 ರಿಂದ 7ನೇ ತರಗತಿ ಹಾಗೂ 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಡಿ.06 ರಂದು ಆಯೋಜಿಸಲಾಗಿತ್ತು. ಪ್ರಾಥಮಿಕ ವಿಭಾಗ ಹಾಗೂ ಪ್ರೌಢಶಾಲಾ ವಿಭಾಗಗಳಲ್ಲಿ ಪ್ರತ್ಯೇಕವಾಗಿ ಸ್ಪರ್ಧೆಗಳು ನಡೆದು ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಪ್ರಾಯೋಜಿಸಲಾಗಿತ್ತು. ಈ ಸ್ಪರ್ಧೆಯ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ರೆವೆರೆಂಡ್ ಫಾದರ್ ವಿಕ್ಟರ್ ಡಿಸೋಜಾ, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ವಿದುಷಿ ಮಂಜುಶ್ರೀ ರಾಘವ್ ಶಾಲಾ-ಪೋಷಕ ಸಮಿತಿಯ ಉಪಾಧ್ಯಕ್ಷರುಗಳಾದ ಹೇಮನಾಥ್ ಬಿ.ಕೊಡಿಯಾಲ್ ಬೈಲ್, ಶಶಿಧರ್ ಎಂ. ಜೆ, ಪೂರ್ವ ಶೆಟ್ಟಿ ,ಮುಖ್ಯ ಶಿಕ್ಷಕಿ ಸಿಸ್ಟರ್ ಮೇರಿ ಸ್ಟೆಲ್ಲಾ ಹಾಗೆ ಡಾನ್ಸ್ ಸ್ಪರ್ಧೆಯ ತೀರ್ಪುಗಾರರಾಗಿ ಕುಮಾರಿ ಪ್ರಣಮ್ಯ, ಕುಮಾರಿ ರಾಧಿಕಾ ಹಾಗೂ ಅಲ್ವಿಯಾಸ್ ಡಿಲ್ಲರಿಯೋ ಉಪಸ್ಥಿತರಿದ್ದರು.
ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಿಸಿ ದೀಪ ಬೆಳಗುವುದರೊಂದಿಗೆ ಚಾಲನೆಗೊಂಡಿತು. ಕಾರ್ಯಕ್ರಮದ ಮುಖ್ಯ ಅತಿಥಿ ಯವರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಶುಭ ಹಾರೈಸಿದರು. ಪಿ.ಟಿ.ಎ ಉಪಾಧ್ಯಕ್ಷ ಹೇಮನಾಥ್ ಕೊಡಿಯಾಲ್ ಬೈಲ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಾಲಾ ಸಂಚಾಲಕರಾದ ವಂದನೀಯ ಧರ್ಮ ಗುರುಗಳು ವಿಕ್ಟರ್ ಡಿಸೋಜಾ ರವರು ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು.
ನೆರೆದಂತಹ ಗಣ್ಯರನ್ನು ಸಿಸ್ಟರ್ ಮೇರಿ ಸ್ಟೆಲ್ಲಾ ಸ್ವಾಗತಿಸಿ, ಸಹ ಶಿಕ್ಷಕಿ ಶ್ರೀಮತಿ ಆಶಾರವರು ವಂದಿಸಿದರು,ಸಹ ಶಿಕ್ಷಕಿಯರಾದ ಶ್ರೀಮತಿ ಮಮತಾ ಹಾಗೂ ಶ್ರೀಮತಿ ಅಕ್ಷತಾ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಾರ್ಥಮಿಕ ವಿಭಾಗದಲ್ಲಿ 6’ಬಿ’ ತರಗತಿ ವಿದ್ಯಾರ್ಥಿಗಳಾದ
ಸೋನಾ ಅಡ್ಕಾರು ಹಾಗೂ ತಂಡ ಪ್ರಥಮ ಬಹುಮಾನವನ್ನು ಪಡೆದುಕೊಂಡರೆ, 5 ‘ಎ’ ವಿದ್ಯಾರ್ಥಿಗಳಾದ ಶ್ರೀ ಶೌರ್ಯ ಮತ್ತು ತಂಡ ದ್ವಿತೀಯ ಬಹುಮಾನ ಹಾಗೂ 6 ‘ಎ’ ವಿದ್ಯಾರ್ಥಿಗಳಾದ ಸಾಯಿ ನಕ್ಷತ್ರ ಹಾಗೂ ತಂಡ ತೃತೀಯ ಬಹುಮಾನವನ್ನು ಪಡೆದರು.
ಪ್ರೌಢಶಾಲಾ ವಿಭಾಗದಲ್ಲಿ 9 ‘ಎ’ ತರಗತಿ ವಿದ್ಯಾರ್ಥಿಗಳಾದ ವಿಹಾನಿ ಮತ್ತು ತಂಡ ಪ್ರಥಮ ಸ್ಥಾನವನ್ನು ಪಡೆದು, ದ್ವಿತೀಯ ಸ್ಥಾನವನ್ನು 9′ ಬಿ ‘ತರಗತಿ ವಿದ್ಯಾರ್ಥಿಗಳಾದ ತನ್ವಿ ಮತ್ತು ತಂಡ, ತೃತಿಯ ಸ್ಥಾನವನ್ನು 9 ‘ಬಿ’ ವಿದ್ಯಾರ್ಥಿಗಳಾದ ಸಾರಿಕಾ ಮತ್ತು ತಂಡ ಪಡೆದುಕೊಂಡಿತು. ಕಾರ್ಯಕ್ರಮದ ಯಶಸ್ವಿಗೆ ಶಿಕ್ಷಕ ವೃಂದ ಹಾಗೂ ಬೋಧಕೇತರ ಸಿಬ್ಬಂದಿಗಳು ಸಂಪೂರ್ಣ ಸಹಕಾರವನ್ನು ನೀಡಿದರು.