ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ವಲಯದ ಅಲೆಟ್ಟಿ ಸದಾಶಿವ ಒಕ್ಕೂಟದ ತ್ರೈಮಾಸಿಕ ಸಭೆಯು ಆಲೆಟ್ಟಿ ಸೊಸೈಟಿ ಸಭಾಭವನದಲ್ಲಿ ಡಿ.8 ರಂದು ನಡೆಯಿತು.
ಸುಳ್ಯ ಅರಕ್ಷಕ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಂತೋಷ್ ರವರು ಮಾತನಾಡಿ “ಡಿಜಿಟಲ್ ವ್ಯವಹಾರದಲ್ಲಿ ಆಗುವ ಅನಾಹುತಗಳು, ಹೆಣ್ಣು ಮಕ್ಕಳ ಮೇಲೆ ಆಗುವ ದೌರ್ಜನ್ಯ, ವಾಹನ ಚಲಾವಣೆ ಸಂಧರ್ಭದಲ್ಲಿ ಹೊಂದಿರಬೇಕಾದ ದಾಖಲಾತಿ ಹಾಗೂ ವಾಹನ ಚಲಾವಣೆ ಸಂದರ್ಭ ಮುನ್ನೆಚ್ಚರಿಕೆ ಕ್ರಮ ವಹಿಸುವ ಬಗ್ಗೆ ಕಾನೂನಿನ ಅರಿವು ಜಾಗೃತಿ ಕಾರ್ಯಾಗಾರ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ನಿತ್ಯಾನಂದ ಕಲ್ಲೆಂಬಿ, ಒಕ್ಕೂಟದ ಪದಾಧಿಕಾರಿಯವರು, ವಲಯ ಮೇಲ್ವಿಚಾರಕಿ ಜಯಶ್ರೀ, ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ರೋಹಿಣಿ, ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.