12 ಸ್ಥಾನಕ್ಕೆ 26 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿ
- ಕಾಂಗ್ರೆಸ್ ನಿಂದ 13 ಅಭ್ಯರ್ಥಿಗಳು – ಒಬ್ಬರಿಂದ ಸ್ವತಂತ್ರ ಸ್ಪರ್ಧೆ
ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯು ಡಿ.25 ರಂದು ನಡೆಯಲಿದ್ದು, 26 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
ಕಾಂಗ್ರೆಸ್ ಬೆಂಬಲಿತರು 12 ಮಂದಿ ಇರಬೇಕಾದಲ್ಲಿ 13 ಮಂದಿ ಅಭ್ಯರ್ಥಿಗಳು, ಬಿಜೆಪಿ ಬೆಂಬಲಿತರಾದ 12 ಮಂದಿ ಅಭ್ಯರ್ಥಿಗಳು ಹಾಗೂ ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
ಡಿ.19 ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದು 11 ಮಂದಿ ಅಭ್ಯರ್ಥಿಗಳು ನಾಮಪತ್ರ ವಾಪಾಸು ತೆಗೆದುಕೊಂಡಿದ್ದಾರೆ.
ದಯಾಕರ ಆಳ್ವ, ಸುನಿಲ್ ಕುಮಾರ್ ರೈ, ಕಿಶೋರ್ ಕುಮಾರ್ ಪಿ., ನಿತಿನ್ ರಾಜ್ ಶೆಟ್ಟಿ, ಮಂಜಪ್ಪ ರೈ, ಸಂಜಯ ಕೆ, ಚಂದ್ರಶೇಖರ ಪನ್ನೆ , ಬಶೀರ್ ಅಹ್ಮದ್ , ಸಾವಿತ್ರಿ ಚಾಮುಂಡಿಮೂಲೆ, ಆನಂದ ಬೆಳ್ಳಾರೆ,ಲಕ್ಷ್ಮಣ ಬಿ.ಜಿ.ಯವರು ನಾಮಪತ್ರ ವಾಪಾಸು ತೆಗೆದುಕೊಂಡಿದ್ದಾರೆ.
ಸಾಮಾನ್ಯ ಕ್ಷೇತ್ರಕ್ಜೆ ಕಾಂಗ್ರೆಸ್ ಬೆಂಬಲಿತರಾಗಿ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಗಳಾದ ಅನಿಲ್ ರೈ ಚಾವಡಿಬಾಗಿಲು, ಕರುಣಾಕರ ಆಳ್ವ, ರಮೇಶ ಮಾರ್ಲ, ಎನ್.ಎಸ್.ಡಿ.ವಿಠಲದಾಸ್, ಪ್ರಮೋದ್ ಶೆಟ್ಟಿ ಕುಂಟುಪುಣಿಗುತ್ತು, ಶ್ರೀರಾಮ ಪಾಟಾಜೆ, ಹಿಂದುಳಿದ ವರ್ಗ ಬಿ ಸ್ಥಾನಕ್ಕೆ ಸುನಿಲ್ ರೈ ಪುಡ್ಕಜೆ, ಹಿಂದುಳಿದ ವರ್ಗ ಎ ಸ್ಥಾನಕ್ಕೆ ಮಹಮ್ಮದ್ ಮುಸ್ತಾಫ, ಪರಿಶಿಷ್ಟ ಜಾತಿ ಸ್ಥಾನದಿಂದ ಮುದ್ದ ಬೇರ್ಯ ಮತ್ತು ರಾಮ ಪೆರುವಾಜೆ, ಪರಿಶಿಷ್ಟ ಪಂಗಡ ಸ್ಥಾನಕ್ಕೆ ಚಂದ್ರಶೇಖರ ಪೆಲತ್ತಡ್ಕ, ಮಹಿಳಾ ಕ್ಷೇತ್ರಕ್ಕೆ ಶಾರದಾ ರೈ ಕೊರಂಗಾಜೆ, ನಿರ್ಮಲ ರೈ ಕೆಡೆಂಜಿಮೊಗ್ರು ಅಂತಿಮ ಕಣದಲ್ಲಿದ್ದಾರೆ. ಇವರಲ್ಲಿ ಪರಿಶಿಷ್ಟ ಜಾತಿ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರಾಗಿ ನಾಮಪತ್ರ ಸಲ್ಲಿಸಿರುವ ಮುದ್ದ ಹಾಗೂ ರಾಮರಲ್ಲಿ ಮುದ್ದರನ್ನು ಅಧಿಕೃತ ಕಾಂಗ್ರೆಸ್ ಬೆಂಬಲಿತರೆಂದು ಪರಿಗಣಿಸಲು ಸ್ಥಳೀಯ ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆಂದು ಹೇಳಲಾಗುತ್ತಿದೆ. ಇದರಿಂದ ತೀವ್ರ ಅಸಮಾಧಾನಕ್ಕೆ ಒಳಗಾಗಿರುವ ರಾಮ ಪೆರುವಾಜೆಯವರು ತಾನು ಅಧಿಕೃತ ಅಭ್ಯರ್ಥಿಯಾಗಲು ಪ್ರಯತ್ನ ಮಾಡುತ್ತಿದ್ದಾರೆ. ಏನಾಗುವುದೆಂದು ಕಾದು ನೋಡಬೇಕಾಗಿದೆ.
ಸಾಮಾನ್ಯ ಕ್ಷೇತ್ರಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಪದ್ಮನಾಭ ಶೆಟ್ಟಿ ಪೆರುವಾಜೆ, ರಾಮಕೃಷ್ಣ ಭಟ್ ಕುರುಂಬುಡೇಲು, ನಾರಾಯಣ ಕೊಂಡೆಪ್ಪಾಡಿ, ಭಾಸ್ಕರ ನೆಟ್ಟಾರು, ಸಾಯಿಪ್ರಸಾದ್ ರೈ ಕೆಡಂಜಿಮೊಗ್ರು, ಜನಾರ್ಧನ ಗೌಡ ಆರ್ವಾರ, ಹಿಂದುಳಿದ ವರ್ಗ ಬಿ ಸ್ಥಾನಕ್ಕೆ ಐತ್ತಪ್ಪ ರೈ ಅಜ್ರಂಗಳ, ಹಿಂದುಳಿದ ವರ್ಗ ಎ ಸ್ಥಾನಕ್ಕೆ ವಾಸುದೇವ ಐಗಳಮಕ್ಕಿ, ಮಹಿಳಾ ಸ್ಥಾನಕ್ಕೆ ಶ್ರೀಮತಿ ಭಾರತಿ ಕೊಚ್ಚಿ, ಶ್ರೀಮತಿ ವನಿತಾ ಸಾರಕರೆ, ಪರಿಶಿಷ್ಟ ಪಂಗಡ ಸ್ಥಾನಕ್ಕೆ ಸುಂದರ ನಾಯ್ಕ ನಾಗನಮಜಲು, ಪರಿಶಿಷ್ಟ ಜಾತಿ ಸ್ಥಾನಕ್ಕೆ ಬಿಯಾಳು ಬೇರಿಯ ಅಂತಿಮ ಕಣದಲ್ಲಿದ್ದಾರೆ.
ಸ್ವತಂತ್ರ ಅಭ್ಯರ್ಥಿಗಳಾಗಿ ಮಾಧವ ತಡಗಜೆ ಅಂತಿಮ ಕಣದಲ್ಲಿದ್ದಾರೆ.