ಮರ್ಕಂಜ : ಹೈದಂಗೂರು ರೆಂಜಾಳದಲ್ಲಿ‌ ಕಾಡಾನೆ ಹಾವಳಿ‌-ಅರಣ್ಯ ಇಲಾಖೆಯಿಂದ ಎಚ್ಚರಿಕೆ ಫಲಕ ಅಳವಡಿಕೆ

0

ಗ್ರಾಮಸ್ಥರ ಮನವಿಗೆ ಅರಣ್ಯ ಇಲಾಖೆಯ ಸ್ಪಂದನೆ

ದೊಡ್ಡತೋಟ ರಸ್ತೆಯ ಹೈದಂಗೂರು ಮತ್ತು ರೆಂಜಾಳ ಭಾಗದಲ್ಲಿ ಆಗಾಗ ಕಾಡಾನೆಗಳು ಕಾಣಿಸತೊಡಗಿದ್ದು, ಇದು ಗ್ರಾಮಸ್ಥರಲ್ಲಿ ಆತಂಕ ಮತ್ತು ಭಯ ಸೃಷ್ಠಿಸಿತ್ತು. ಹೀಗಾಗಿ ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಸ್ಥರು ರೆಂಜಾಳ‌ ದೇವಸ್ಥಾನದಲ್ಲಿ‌ ಸಭೆ ಸೇರಿ ಚರ್ಚಿಸಿ ಅರಣ್ಯ ಇಲಾಖೆಗೆ ಕೆಳವೊಂದು ಬೇಡಿಕೆ ಈಡೇರಿಸುವಂತೆ ಮನವಿ ನೀಡಿದ್ದರು.

ಮನವಿಗೆ ಸ್ಪಂದಿಸಿರುವ ಅರಣ್ಯ ಇಲಾಖೆ ಈ ಭಾಗದ ರಸ್ತೆಯಲ್ಲಿ ಸಂಚರಿಸುವವರ ಗಮನಕ್ಕೆ ಬರುವಂತೆ ಎಚ್ಚರಿಕೆ ನಾಮಫಲಕ ಅಳವಡಿಸಿದ್ದಾರೆ. ಮತ್ತು ರಸ್ತೆಯ ಎರಡು ಭಾಗದಲ್ಲಿ ಕಾಡನೆಗಳು ರಸ್ತೆಯಂಚಿಗೆ ಬಂದರೆ ರಸ್ತೆಯಲ್ಲಿ ಸಂಚರಿಸುವವರಿಗೆ ಕಾಣುವಂತೆ ಕಾಡು ಕಡಿದಿದ್ದಾರೆ.‌ ಆ ಮೂಲಕ‌ ಅರಣ್ಯ ಇಲಾಖೆ ಗ್ರಾಮಸ್ಥರ ಮನವಿಗೆ ಸ್ಪಂದಿಸಿದೆ.


ಸೂಚನಾ ಫಲಕದಲ್ಲಿ ಗಮನಿಸಿ ಚಲಿಸಿ. ವನ್ಯ ಪ್ರಾಣಿಗಳಿರುವ ಸ್ಥಳ. ವಾಹನ ನಿಲುಗಡೆ ಮತ್ತು ಕಸ ಹಾಕುವುದನ್ನು ನಿಷೇಧಿಸಿದೆ. ‌ನಿಯಮ‌ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಫಲಕ ಅಳವಡಿಸಲಾಗಿದೆ.