ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂ.ಬಿ.ಎ. ಮತ್ತು ಎಂ.ಟೆಕ್. ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

0


ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ 2024-25 ಸಾಲಿನ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾದ ಶ್ರೀಮತಿ ಸುಪ್ರೀತಾ ಕೆ.ಎಸ್. ಮುಖ್ಯ ಕ್ಯಾಶಿಯರ್, ಬ್ಯಾಂಕ್ ಆಫ್ ಬರೋಡಾ, ಸುಳ್ಯ ಶಾಖೆ ಇವರು ವಿದ್ಯಾಭ್ಯಾಸದ ಮಹತ್ವ ಮತ್ತು ಪೋಷಕರೊಂದಿಗೆ ಯಾವ ರೀತಿಯಲ್ಲಿ ವರ್ತಿಸಬೇಕು ಎಂಬುದಾಗಿ ತಿಳಿಸಿದರು.


ಗೌರವ ಅತಿಥಿಗಳಾಗಿ ಮಾತನಾಡಿದ ವಿ.ಟಿ.ಯು ಎಕ್ಸಿಕ್ಯುಟಿವ್ ಕೌನ್ಸಿಲ್ ಸದಸ್ಯರು/ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್
ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಜ್ವಲ್ ಯು.ಜೆ.ಯವರು ಕೌಶಲ್ಯಗಳನ್ನು ಜೀವನದಲ್ಲಿ ಅಭಿವೃದ್ಧಿಪಡಿಸಿಕೊಂಡರೆ ಅವಕಾಶಗಳನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬಹುದೆಂದು ಸಲಹೆಯನ್ನು ನೀಡಿದರು. ಎಂ.ಬಿ.ಎ. ವಿಭಾಗ ಮುಖ್ಯಸ್ಥರಾದ ಪ್ರೊ. ಕೃಷ್ಣಾನಂದ ಎ. ರವರು ಸ್ವಾಗತಿಸಿ, ಆದರ್ಶ ಡಿ. ಪ್ರಾಧ್ಯಾಪಕರು, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗ ಇವರು ವಂದಿಸಿದರು ಹಾಗೂ ಎಂ.ಬಿ.ಎ. ವಿಭಾಗದ ಪ್ರೊ. ಶ್ರೀಮಣಿ ಕೆ. ಮತ್ತು ಪ್ರೊ. ರಮ್ಯ ಎ.ಬಿ.ಯವರು ಕಾರ್ಯಕ್ರಮ ನಿರೂಪಿಸಿದರು.