ಮರ್ಕಂಜ ಗ್ರಾಮದ ಮುಂಡೋಡಿ ದಿ.ತಿಮ್ಮಪ್ಪ ನಾಯ್ಕ ಎಂಬವರ ಪತ್ನಿ ಶ್ರೀಮತಿ ಸುಶೀಲರವರು ಇಂದು ಬೆಳಿಗ್ಗೆ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಸುಮಾರು 75 ವರ್ಷ ವಯಸ್ಸಾಗಿತ್ತು.
ಮೃತರು ಓರ್ವ ಪುತ್ರ ಜನಾರ್ಧನ ನಾಯ್ಕ ಮುಂಡೋಡಿ, ಪುತ್ರಿಯರಾದ ಶ್ರೀಮತಿ ಯಶೋಧ ಮೋನಪ್ಪ ನಾಯ್ಕ ಕುದುರೆಪಾಯ, ಶ್ರೀಮತಿ ಚಂದ್ರಾವತಿ ಸದಾಶಿವ ನಾಯ್ಕ ಓಟೆ, ಸಹೋದರ ಗಂಗಾಧರ ನಾಯ್ಕ ಕೊರತ್ತೋಡಿ, ಸಹೋದರಿ ಶ್ರೀಮತಿ ಪಾರ್ವತಿ ನಂದಗೋಕುಲ ಹಾಗೂ ಸೊಸೆ, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.