ಬೆಳ್ಳಾರೆ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ 6ನೇ ಆರೋಪಿ ಪೊಲೀಸ್ ವಶಕ್ಕೆ

0

ವಿದೇಶದಿಂದ ಮರಳುವ ವೇಳೆ ವಶಕ್ಕೆ ಪಡೆದ ಎನ್ ಐ ಎ ತಂಡ

ಹಿಂದೂ ಪರ ಸಂಘಟನೆ ಮುಖಂಡ ಬೆಳ್ಳಾರೆ ಪ್ರವೀಣ್ ನೆಟ್ಟಾರುರವರ ಕೊಲೆಯ 6 ನೇ ಆರೋಪಿ ಕೊಡಾಜೆಯ ಮೊಹಮ್ಮದ್ ಶರೀಫ್(55.ವ) ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ.

ವಿದೇಶದಿಂದ ವಾಪಸ್ ಬರುವಾಗ ದೆಹಲಿ ಏರ್ಪೋಟ್ನ್ರಲ್ಲಿ ಮೊಹಮ್ಮದ್ ಶರೀಫ್ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಶರೀಫ್‌ ಪತ್ತೆಗಾಗಿ ಎನ್‌ಐಎ ಅಧಿಕಾರಿಗಳು 5 ಲಕ್ಷ ರೂ. ಬಹುಮಾನ ಘೋಷಿಸಿದ್ದರು. ನಿಷೇಧಿತ ಪಿಎಫ್‌ಐ ಸಂಘಟನೆಯ ಮುಖಂಡನಾಗಿದ್ದ ಮೊಹಮ್ಮದ್ ಶರೀಫ್‌ ಮನೆಗೆ ಎರಡು ಬಾರಿ ಎನ್‌ಐಎ ಅಧಿಕಾರಿಗಳು ದಾಳಿ ಮಾಡಿದ್ದರು.