ಮೊಗರ್ಪಣೆ ಊರೂಸ್ ಸಮಾರಂಭದ ಸ್ವಾಗತ ಸಮಿತಿ ರಚನೆ

0

ಚೇರ್ಮೆನ್ ಹಾಜಿ ಜಿ ಇಬ್ರಾಹಿಂ ಸೀ ಫುಡ್,ಕನ್ವೀರ್ ರಾಗಿ ಹಾಜಿ ಅಬ್ದುಲ್ ರಝ್ಝಾಕ್ ಶೀತಲ್ ರವರು ಆಯ್ಕೆ

ಮೊಗರ್ಪಣೆ ಮಾಂಬ್ಳಿ ತಂಙಳ್ ರವರ ಹೆಸರಿನಲ್ಲಿ ಪ್ರತೀ ಎರಡು ವರ್ಷಕ್ಕೊಮ್ಮೆ ಆಚರಿಸಿಕ್ಕೊಂಡು ಬರುವ ಉರೂಸ್ ಸಮಾರಂಭ ಜ. 12 ರಿಂದ 15 ರವರೆಗೆ 4 ದಿನಗಳಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದ ಯಶಸ್ವಿಗಾಗಿ ಡಿ 20 ರಂದು ಜುಮಾ ನಮಾಝ್ ಬಳಿಕ ಸ್ಥಳೀಯ ಮದ್ರಸ ಸಭಾಂಗಣದಲ್ಲಿ ಸಭೆ ನಡೆಸಿ ಉರೂಸ್ ಸ್ವಾಗತ ಸಮಿತಿಯನ್ನು ರಚಿಸಲಾಯಿತು.

ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಸ್ಥಳೀಯ ಮಸ್ಜಿದ್ ಮುದರ್ರಿಸ್ ಹಾಫಿಲ್ ಶೌಖತ್ ಅಲಿ ಸಖಾಫಿ ರವರ ದುವಾ ದೊಂದಿಗೆ ನೆರವೇರಿತು.
ಅಧ್ಯಕ್ಷತೆಯನ್ನು ಎಚ್ ಐ ಜೆ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್ ವಹಿಸಿದ್ದರು.


ಸಭೆಯಲ್ಲಿ ಉರೂಸ್ ಸ್ವಾಗತ ಸಮಿತಿ ರಚಿಸಿ ಚೇರ್ಮೆನ್ ರಾಗಿ ಹಾಜಿ ಜಿ ಇಬ್ರಾಹಿಂ ಸೀ ಫುಡ್ ರವರನ್ನು ಅಂಗೀಕರಿಸಿ ಕಂನ್ವೀನರ್ ರಾಗಿ ಹಾಜಿ ಅಬ್ದುಲ್ ರಝ್ಝಾಕ್ ಶೀತಲ್ ರವರನ್ನು ಆಯ್ಕೆ ಮಾಡಲಾಯಿತು.
ವೈಸ್ ಕಂನ್ವೀನರ್ ಗಳಾಗಿ ಹನೀಫ್ ಪೋಸೋಟ್, ಅಬ್ದುಲ್ ರಶೀದ್ ಕೆ ವಿ ಜಿ, ಆಹಾರ ಸಮಿತಿಗೆ ನವಾಜ್ ಪಂಡಿತ್, ಜಬ್ಬಾರ್ ಲ್ಯಾಂಡ್ ಲಿಂಕ್ಸ್, ರಶೀದ್ ಮಿಲ್, ಅಲಂಕಾರ ಸಮಿತಿಗೆ ಕೆ ಎಂ ಬಶೀರ್, ಸಾಧಿಕ್ ಪೈಚಾರ್, ಜಲೀಲ್ ಆಟೋ, ಪ್ರಚಾರ ಸಮಿತಿಗೆ ಅಬ್ದುಲ್ ಕರೀಂ ಸಖಾಫಿ ಹಾಗೂ ಮುಅಲ್ಲಿಮ್ ವೃಂದ,
ಹಾಗೂ ಅತಿಥಿ ಸ್ವೀಕರಣ ಸಮಿತಿಗೆ ಹಸೈನಾರ್ ಜಯನಗರ ಹಾಗೂ ಶಾಫಿ ಅಡ್ಕ ಇವರನ್ನು ಆಯ್ಕೆ ಮಾಡಲಾಯಿತು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕಟ್ಟಡ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ಸಮದ್ ಹಾಗೂ ಪ್ರಧಾನ ಕಾರ್ಯದರ್ಶಿ ಎಸ್ ಯು ಇಬ್ರಾಹಿಂ ರವರು ಪ್ರಾಸ್ತವಿಕ ಮಾತನಾಡಿ ಕಾರ್ಯಕ್ರಮಗಳ ವಿವರವನ್ನು ನೀಡಿದರು.
ಸದರ್ ಮುಅಲ್ಲಿಮ್ ಅಬ್ದುಲ್ ಕರೀಂ ಸಖಾಫಿ ದುವಾ ನೆರವೇರಿಸಿದರು.
ವೇದಿಕೆಯಲ್ಲಿ ಜಮಾಅತ್ ಸಮಿತಿ ಸದಸ್ಯರುಗಳಾದ ಅಬ್ದುಲ್ ಖಾದರ್( ಅಂದು), ಅಬ್ದುಲ್ ರಝಕ್ ಜಿ ಕೆ, ಹಾಗೂ ಎನ್ ಐ ಎಂ ಮದ್ರಸಾ ಅದ್ಯಾಪಕರುಗಳು ಉಪಸ್ಥಿತರಿದ್ದರು.

ಸಭೆಯಲ್ಲಿ ಸ್ಥಳೀಯ ಸಹ ಸಂಘಟನೆಗಳಾದ ಕೆ ಎಂ ಜೆ, ಎಸ್ ವೈ ಎಸ್, ಎಸ್ ಎಸ್ ಎಫ್, ಎಂ ಆರ್ ಡಿ ಎ,ಹಳೆ ವಿದ್ಯಾರ್ಥಿಗಳ ಸಂಘ ಓ ಎಸ್ ಎ ಇದರ ಅಧ್ಯಕ್ಷರುಗಳು, ಸದಸ್ಯರುಗಳು, ಸ್ಥಳೀಯ ಜಮಾಅತ್ ಸದಸ್ಯರುಗಳು ಭಾಗವಹಿಸಿದ್ದರು.
ಉಪಾಧ್ಯಕ್ಷ ಹಾಜಿ ಉಮ್ಮರ್ ಎಚ್ ಎ ಸ್ವಾಗತಿಸಿ ಸದಸ್ಯರಾದ ಅಬ್ದುಲ್ ರಹಿಮಾನ್ ಮೊಗರ್ಪಣೆ ವಂದಿಸಿದರು.
ಕಾರ್ಯದರ್ಶಿ ಎಸ್ ವೈ ಅಬ್ದುಲ್ ರೈಮಾನ್ ಸಹಕರಿಸಿದರು.