ಕನ್ನಡ ಭಾಷೆಯ ಉಳಿವನ್ನೇ ತನ್ನ ಉಸಿರಾಗಿಸಿಕೊಂಡು ಕನ್ನಡ ಭಾಷೆ ಹಾಗೂ ಕನ್ನಡ ಶಿಕ್ಷಕರ ಪರವಾಗಿ ಹತ್ತಾರು ಕನ್ನಡಪರ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಕರುನಾಡ ಕನ್ನಡ ಕಲಾಸಿರಿ ಬಳಗವು ಶ್ರೀಮತಿ ಭವ್ಯ ಅಟ್ಲೂರು ರವರಿಗೆ ಕನ್ನಡ ಶಿಕ್ಷಕರಾಗಿ ಸಲ್ಲಿಸಿರುವಂತಹ ಸೇವೆಯನ್ನು ಗುರುತಿಸಿ ಹಾಗೂ ಕರುನಾಡ ಕನ್ನಡ ಕಲಾಸಿರಿ ಬಳಗದ ಸದಸ್ಯತ್ವದ ಆಧಾರದ ಮೇಲೆ 2024-25ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದೆ.
ಇವರು ಬಂಟ್ವಾಳ ತಾಲೂಕು ಪೆರುವಾಯಿಯ ಶ್ರೀಮತಿ ಕಮಲ ಮತ್ತು ಶ್ರೀ ಕೊರಗಪ್ಪ ಕುಲಾಲ್ ರವರ ಪುತ್ರಿಯಾಗಿರುತ್ತಾರೆ. ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಉದ್ಯೋಗಿಯಾಗಿರುವ ದಯಾನಂದ ಎಂ. ಎ ಇವರ ಪತ್ನಿಯಾಗಿರುವ ಭವ್ಯ ಅಟ್ಲೂರು ರವರು ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿರುತ್ತಾರೆ.