ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್ (ರಿ) ಗುತ್ತಿಗಾರು ಸುಳ್ಯ ಆಶ್ರಯದಲ್ಲಿ ನಡೆಯಲಿರುವ ಮೂರು ದಿನಗಳ ಸೂರ್ಯ-ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭ ಕಾರ್ಯಕ್ರಮವು ಡಿ .20 ರಂದು ದೇವಿಸಿಟಿ ಸಭಾಂಗಣದಲ್ಲಿ ನಡೆಯಿತು.
ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್ ನ ಸ್ಥಾಪಕಾಧ್ಯಕ್ಷ ಮಾಯಿಲಪ್ಪ ಗೌಡ ಕೊಂಬೆಟ್ಟು ಮತ್ತು ದೇವಿಪ್ರಸಾದ್ ಚಿಕ್ಮುಳಿ ದೀಪ ಬೆಳಗಿಸಿ ಪಂದ್ಯಾಟ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್ ನ ಉಪಾಧ್ಯಕ್ಷ ಗಿರಿಪ್ರಸಾದ್ ಪಾರೆಪ್ಪಾಡಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಅಂತಾರಾಷ್ಟ್ರೀಯ ಕ್ರೀಡಾಪಟು ಕು.ನಮಿತಾ ಗೋಳ್ಯಾಡಿ, ಗುತ್ತಿಗಾರು ಗ್ರಾಂ.ಪಂ ಸದಸ್ಯರಾದ ವಿಜಯ ಕುಮಾರ್ ಚಾರ್ಮತ , ಕೋಶಾಧಿಕಾರಿ ನಿರಂತ್ ದೇವಶ್ಯ, ಕ್ಲಬ್ ನಿರ್ದೇಶಕರುಗಳಾದ ಚಂದ್ರಶೇಖರ್ ಕಡೋಡಿ, ಶಿವಪ್ರಸಾದ್ ಚಣಿಲ, ವಸಂತ್ ಚತ್ರಪಾಡಿ, ಸುನಿಲ್ ಸಂಪ್ಯಾಡಿ, ವಿನೋದ್ ಗುತ್ತಿಗಾರು ಉಪರಿತರಿದ್ದರು.